ಮಳೆಗಾಲ ಶುರುವಾಗಿದೆ. ಮಳೆ ಮನೆಗೆ ತಂಪು, ಮನಸ್ಸಿಗೆ ತಾಜಾತನ ನೀಡುತ್ತದೆಯಾದರು, ಪೀಠೋಪಕರಣಗಳು, ವಿಶೇಷವಾಗಿ ಮರದಿಂದ ತಯಾರಿಸಲಾದ ಫರ್ನಿಚರ್ ಬಳಸೋರಿಗೆ ಇದು ಆತಂಕದ ಕಾಲ. ಹೆಚ್ಚುವರಿ ಆರ್ದ್ರತೆ, ತೇವ ಮತ್ತು ಏರಿಳಿತದ ತಾಪಮಾನವು ವಾರ್ಪಿಂಗ್, ಶಿಲೀಂಧ್ರಗಳ ಬೆಳವಣಿಗೆ ಮತ್ತು ಮರದಲ್ಲಿ ಗೆದ್ದಲು ಬಾಧೆಗೆ ಕಾರಣವಾಗಬಹುದು. ಆದರೆ ಕೆಲವೊಂದು ಸರಳ ಕ್ರಮಗಳಿಂದ ನಿಮ್ಮ ಮೌಲ್ಯಮಯ ಮರದ ಪೀಠೋಪಕರಣಗಳನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬಹುದು.
ತೇವಾಂಶದಿಂದ ದೂರವಿಡಿ
ಮಳೆಗಾಲದಲ್ಲಿ ಕೊಠಡಿಗಳ ತೇವಾಂಶ ಮಟ್ಟ ಹೆಚ್ಚಾಗುವುದು ಸಹಜ. ಇದರಿಂದ ಮರದ ಫರ್ನಿಚರ್‌ಗಳ ಮೇಲೆ ಶಿಲೀಂಧ್ರ ಬರುವ ಸಾಧ್ಯತೆ ಇರುತ್ತದೆ. ಮನೆಯೊಳಗೆ ಡಿ-ಹ್ಯೂಮಿಡಿಫೈಯರ್ ಅಥವಾ ಫ್ಯಾನ್‌ಗಳನ್ನು ಬಳಸಿ ತೇವಾಂಶ ನಿಯಂತ್ರಿಸಿ. ಮರದ ಮೇಲೆ ನೀರು ಬೀಳದಂತೆ ನೋಡಿಕೊಳ್ಳುವುದು ಮುಖ್ಯ.
ಗ್ಲಾಸ್ ಕವರ್ ಅಥವಾ ಪ್ಲಾಸ್ಟಿಕ್ ಕವಚ ಬಳಸಿ
ಡೆಸ್ಕ್, ಟೇಬಲ್, ಕಪಾಟುಗಳ ಮೇಲೆ ನೀರಿನ ಗ್ಲಾಸ್ ಅಥವಾ ಇತರ ತೇವಾಂಶದ ವಸ್ತುಗಳನ್ನು ಇಡದಂತೆ ನೋಡಿಕೊಳ್ಳಿ. ಆ ಭಾಗದ ಮೇಲೆ ಪ್ಲಾಸ್ಟಿಕ್ ಶೀಟ್ ಅಥವಾ ಗ್ಲಾಸ್ ಕವರ್‌ಗಳನ್ನು ಇಡುವುದು ಉತ್ತಮ.
ಮರದ ಮೇಲ್ಮೈಗೆ ಪಾಲಿಶ್ ಅಥವಾ ವುಡ್ ವಾಕ್ಸ್ ಹಚ್ಚಿ
ಮಳೆಗಾಲಕ್ಕೆ ಮುನ್ನ ಮರದ ಫರ್ನಿಚರ್‌ಗಳಿಗೆ ವಿಶೇಷ ಪಾಲಿಶ್ ಅಥವಾ ವುಡ್ ವಾಕ್ಸ್ ಹಚ್ಚುವುದು ತುಂಬಾ ಪ್ರಯೋಜನಕಾರಿಯಾಗಿದೆ. ಇದು ಫರ್ನಿಚರ್‌ನ ಮೇಲ್ಮೈಗೆ ಒಂದು ರಕ್ಷಣಾ ಪದರವನ್ನು ತರುವ ಮೂಲಕ ನೀರಿನ ಪ್ರವೇಶವನ್ನು ತಡೆಯುತ್ತದೆ.
ಮೂಲೆಯಲ್ಲಿ ಪೀಠೋಪಕರಣಗಳನ್ನು ಇರಿಸಬೇಡಿ
ಮನೆಯ ಮೂಲೆಯ ಭಾಗಗಳಲ್ಲಿ ತೇವಾಂಶ ಹೆಚ್ಚು ಬರುತ್ತದೆ. ಈ ಭಾಗಗಳಲ್ಲಿ ಫರ್ನಿಚರ್ ಇಡುವುದರಿಂದ ಅವು ತೇವದಿಂದ ಕೂಡಲೇ ಹಾಳಾಗಬಹುದು. ಆದ್ದರಿಂದ ಪೀಠೋಪಕರಣಗಳನ್ನು ಗೋಡೆಯಿಂದ ಸ್ವಲ್ಪ ದೂರದಲ್ಲಿ ಇಡುವುದು ಉತ್ತಮ.
ನೆರಳಿನಲ್ಲಿ ಪೀಠೋಪಕರಣಗಳನ್ನು ಒಣಗಿಸಿ
ನೇರ ಸೂರ್ಯನ ಬೆಳಕಿನಲ್ಲಿ ಪೀಠೋಪಕರಣಗಳನ್ನು ಒಣಗಿಸುವುದು ಫರ್ನೀಚರ್ ಬಣ್ಣ ಮಾಸಿಹೋಗಬಹುದು ಅಥವಾ ಅಸಮಾನವಾಗಬಹುದು. ಬದಲಾಗಿ, ನೈಸರ್ಗಿಕವಾಗಿ ಒಣಗಲು ನೆರಳಿನ, ಚೆನ್ನಾಗಿ ಗಾಳಿ ಇರುವ ಸ್ಥಳವನ್ನು ಆರಿಸಿ.
ಮಳೆಗಾಲ ಮನಸ್ಸಿಗೆ ತಂಪು ತಂದರು, ಮರದ ಪೀಠೋಪಕರಣಗಳಿಗೆ ಇದು ಸವಾಲಿನ ಸಮಯ. ಈ ಕೆಲವು ಸರಳ ಸಲಹೆಗಳಿಂದ ನಿಮ್ಮ ಫರ್ನಿಚರ್‌ಗಳು ವರ್ಷಗಟ್ಟಲೆ ಹೊಸದಂತೆ ಉಳಿಯಬಹುದು.