ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಪ್ರಧಾನಿ ದೇವೇಗೌಡರು ಹಾಸನ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದು, ಮತಬೇಟೆ ಮುಂದುವರಿಸಿದ್ದಾರೆ.
ಮೊಮ್ಮಗ ಪ್ರಜ್ವಲ್ ನನ್ನ ಗೆಲ್ಲಿಸಲು ಸತತ ಪ್ರಯತ್ನ ಮಾಡುತ್ತಿರುವ ದೇವೇಗೌಡರು ಬಿಸಲು ಲೆಕ್ಕಿಸದೆ ಪ್ರಚಾರದಲ್ಲಿ ತೊಡಗಿದ್ದಾರೆ.
ಜೆಡಿಎಸ್ 3 ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದರೂ ಹಾಸನವನ್ನ ಹೆಚ್ಚು ಟಾರ್ಗೆಟ್ ಮಾಡಿ, ಹೆಚ್ಚಿನ ಶ್ರಮವನ್ನೂ ಹಾಕಲಾಗುತ್ತಿದೆ. ಇಲ್ಲಿನ ಪ್ರತಿ ತಾಲೂಕು ಸಭೆಗಳನ್ನು ಕೂಡ ದೇವೇಗೌಡರೇ ನಿರ್ವಹಿಸುತ್ತಿದ್ದಾರೆ. ಒಟ್ಟಾರೆ ಮೊಮ್ಮಗನನ್ನು ಗೆಲ್ಲಿಸಲು ದೇವೇಗೌಡರು ಪಣ ತೊಟ್ಟಂತಿದೆ.
ಇಂದು ಹೊಳೆನರಸೀಪುರದ ಬಾಗೇವಾಳು, ಮಳಲಿಯಲ್ಲಿ ಕಾರ್ಯಕರ್ತರ ಸಭೆ ನಡೆಸಲಾಗುತ್ತಿದೆ. ಹಾಸನದಲ್ಲಿ ಅಸಮಾಧಾನ ಬಗೆಹರಿಸಿ ಪ್ರಜ್ವಲ್ ಗೆಲುವಿನ ದಾರಿ ಸುಲಭವಾಗಿಸುತ್ತಿದ್ದಾರೆ.