ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದುಗಳು ಸಹಿಷ್ಣು ಗುಣ ಹೊಂದಿದವರು. ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ. ಹೀಗಾಗಿ ಹಿಂದುಗಳ ಬಗ್ಗೆ ಮಾತನಾಡುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಅಗ್ನಿಹೋತ್ರ ಸೇರಿದಂತೆ ಸನಾತನ, ಹಿಂದು ಪರಂಪರೆ ಪದ್ಧತಿ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವ ಎಡ ಪಂಥೀಯರು ಬೇರೆ ಧರ್ಮದ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಹಿಂದು ಜೀವನದ ಪದ್ಧತಿ, ಜಾತಿ, ಮತ, ಪಂಥದ ಪ್ರಶ್ನೆ ಬರುವುದಿಲ್ಲ. ದೇವರ ಪೂಜೆ ಮಾಡಿದರೂ ಸರಿ. ಮಾಡದಿದ್ದರೂ ಸರಿ. ಆದರೆ, ಅನವಶ್ಯಕ ಟೀಕೆ ಬೇಡ. ಇದು ಭಾರತೀಯ ಅಸ್ಮಿತೆ ದುರ್ಬಲಗೊಳಿಸುವ ಪ್ರಯತ್ನ ಎಂದು ಜೋಶಿ ಕಿಡಿಕಾರಿದರು.
ಅಗ್ನಿಹೋತ್ರ ನಮ್ಮ ಸನಾತನ ಪರಂಪರೆಯ ಪದ್ಧತಿ. ಇಂತಹ ಪದ್ಧತಿಗಳ ಬಗ್ಗೆ ಹೆಚ್ಚಿನ ಅಧ್ಯಯನ ಆಗಬೇಕು. ಎಲ್ಲ ಧರ್ಮದವರೂ ಅಗ್ನಿಹೋತ್ರದಲ್ಲಿ ಭಾಗವಹಿಸಬಹುದು. ದೇಶದಲ್ಲಿ ಕೆಲ ಎಡಪಂಥಿಯರು ಇದನ್ನು ಟೀಕೆ ಮಾಡುತ್ತಾರೆ. ಅದರಲ್ಲೂ ಹಿಂದು ಸಮಾಜದಲ್ಲಿ ಹುಟ್ಟಿದವರು ಟೀಕೆ ಮಾಡುತ್ತಿದ್ದು ಸರಿಯಲ್ಲ ಎಂದರು.