ಸೆ. 8 ರಿಂದ 200 ಕ್ಕೂ ಹೆಚ್ಚು ರೈಲುಗಳು ತಾತ್ಕಾಲಿಕ ರದ್ದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಷ್ಟ್ರ ರಾಜಧಾನಿ ದೆಹಲಿ G20 ಶೃಂಗಸಭೆಗೆ ಸಜ್ಜಾಗಿದ್ದು, ಈ ಹಿನ್ನೆಲೆ ಉತ್ತರ ರೈಲ್ವೇಯು ಸೆಪ್ಟೆಂಬರ್ 8 ರಿಂದ 11 ರವರೆಗೆ ತಾತ್ಕಾಲಿಕವಾಗಿ 200 ಕ್ಕೂ ಹೆಚ್ಚು ಪ್ರಯಾಣಿಕ ರೈಲು ಸೇವೆಗಳನ್ನು ರದ್ದುಗೊಳಿಸಲು ಮತ್ತು ಬೇರೆಡೆಗೆ ತಿರುಗಿಸಲು ನಿರ್ಧರಿಸಿದೆ ಎಂದು ರೈಲ್ವೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವೇಳಾಪಟ್ಟಿಯ ಪ್ರಕಾರ, ಸೆಪ್ಟೆಂಬರ್ 9 ರಂದು 90 ಕ್ಕೂ ಹೆಚ್ಚು ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ. ಸೆಪ್ಟೆಂಬರ್ 10 ರಂದು 100 ಕ್ಕೂ ಹೆಚ್ಚು ಪ್ರಯಾಣಿಕ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ. ಇವುಗಳಲ್ಲಿ ಹೆಚ್ಚಿನ ರೈಲುಗಳು ದೆಹಲಿಯಿಂದ ದಕ್ಷಿಣ ಹರಿಯಾಣದ ಸೋನಿಪತ್-ಪಾಣಿಪತ್, ರೋಹ್ಟಕ್, ರೇವಾರಿ ಮತ್ತು ಪಲ್ವಾಲ್ ಮಾರ್ಗಗಳಲ್ಲಿ ಚಲಿಸುತ್ತವೆ.
ದೆಹಲಿ-ರೇವಾರಿ ಎಕ್ಸ್‌ಪ್ರೆಸ್ ವಿಶೇಷ ಮತ್ತು ರೇವಾರಿ-ದೆಹಲಿ ಎಕ್ಸ್‌ಪ್ರೆಸ್ ವಿಶೇಷ ರೈಲುಗಳನ್ನು ಸೆಪ್ಟೆಂಬರ್ 11 ರಂದು ರದ್ದುಗೊಳಿಸಲಾಗುವುದು ಎಂದು ವರದಿ ತಿಳಿಸಿದೆ.

ಈ ಅವಧಿಯಲ್ಲಿ ದೆಹಲಿ ರೈಲು ನಿಲ್ದಾಣಕ್ಕೆ ಬರಬೇಕಿದ್ದ ರೈಲುಗಳನ್ನು ಅರ್ಧದಲ್ಲಿಯೇ ನಿಲ್ಲಿಸಲಿ ಸೂಚಿಸಲಾಗಿದೆ. ದೆಹಲಿಯಲ್ಲಿ ನಿಲುಗಡೆಯಾಗಬೇಕಾದ ರೈಲುಗಳನ್ನು ಗಜಿಯಾಬಾದ್ ಅಥವಾ ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಗಳಲ್ಲಿ ನಿಲ್ಲಿಸಲು ಮತ್ತು ಅಲ್ಲಿಂದ ಹೊಸ ಪ್ರಯಾಣ ಆರಂಭಿಸಲು ಸೂಚಿಸಲಾಗಿದೆ.

ಭಾರತವು ಸೆಪ್ಟೆಂಬರ್ 9 ಮತ್ತು 10 ರಂದು ರಾಷ್ಟ್ರ ರಾಜಧಾನಿಯಲ್ಲಿ G20 ಶೃಂಗಸಭೆಯನ್ನು ಆಯೋಜಿಸಲಾಗಿದೆ. G20 ಶೃಂಗಸಭೆಯು ಸದಸ್ಯ ರಾಷ್ಟ್ರಗಳ ನಾಯಕರು ಮತ್ತು ಆಹ್ವಾನಿತ ಅತಿಥಿ ರಾಷ್ಟ್ರಗಳ ತಂಗುವಿಕೆ ಸೇರಿದಂತೆ ಬೃಹತ್ ಕಾರ್ಯಕ್ರಮಕ್ಕಾಗಿ ಸುವ್ಯವಸ್ಥೆಗೊಳಿಸಲಾಗಿದೆ.

ಭಾರತವು ಬಾಂಗ್ಲಾದೇಶ, ಈಜಿಪ್ಟ್, ಮಾರಿಷಸ್, ನೆದರ್ಲ್ಯಾಂಡ್ಸ್, ನೈಜೀರಿಯಾ, ಒಮನ್, ಸಿಂಗಾಪುರ, ಸ್ಪೇನ್ ಮತ್ತು ಯುಎಇಯನ್ನು ಮೆಗಾ ಈವೆಂಟ್‌ಗೆ ಅತಿಥಿ ರಾಷ್ಟ್ರಗಳಾಗಿ ಆಹ್ವಾನಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!