ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ನಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ತೊಂದರೆಗೊಳಗಾದ ನೂರಾರು ಮಂದಿ ತಮ್ಮ ವಾಸಸ್ಥಾನ ತೊರೆದು, ನೆರೆಯ ಮಾಲ್ಡಾದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನರಿಗೆ ಸ್ಥಳೀಯ ಆಡಳಿತವು ಶಾಲೆಗಳಲ್ಲಿ ಆಶ್ರಯ ಮತ್ತು ಆಹಾರ ಒದಗಿಸಿದೆ. ದೋಣಿಗಳನ್ನು ಬಳಸಿ ನದಿ ದಾಟುತ್ತಿರುವವರಿಗೆ ಸಹಾಯ ಒದಗಿಸಲು ಸ್ವಯಂಸೇವಕರನ್ನು ನಿಯೋಜಿಸಲಾಗಿದೆ.
ಈ ಕುರಿತು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಪ್ರತಿಕ್ರಿಸಿ, ‘ಧುಲಿಯಾನ್ ಮುರ್ಶಿದಾಬಾದ್‌ನ 400ಕ್ಕೂ ಹೆಚ್ಚು ಮಂದಿ ಹಿಂದುಗಳು ಮತಾಂಧರ ಭೀತಿಯಿಂದಾಗಿ ನದಿ ದಾಟಿ ಓಡಿಹೋಗಿದ್ದಾರೆ.
ಟಿಎಂಸಿಯ ತುಷ್ಟೀಕರಣ ರಾಜಕೀಯವು ಮೂಲಭೂತವಾದಿಗಳಿಗೆ ಧೈರ್ಯ ತಂದುಕೊಟ್ಟಿದೆ. ಹಿಂದುಗಳನ್ನು ಗುರಿಯಾಗಿಸಿಕೊಂಡು ಈ ಕೃತ್ಯಗಳನ್ನು ನಡೆಸಿದೆ. ನಮ್ಮ ಜನರು ಅವರದ್ದೇ ನಾಡಿನಲ್ಲಿ ಜೀವ ಉಳಿಸಿಕೊಳ್ಳಲು ಓಡಿಹೋಗುತ್ತಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಹೀಗೆ ಕುಸಿಯುವಂತೆ ಮಾಡಿರುವುದಕ್ಕೆ ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.