ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಯಲ್ಲಿಸತತ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ನಿರ್ಗಮಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ 50ಕ್ಕೂ ಹೆಚ್ಚು ವಿಶ್ವನಾಯಕರಿಂದ ಅಭಿನಂದನಾ ಮಹಾಪೂರವೇ ಹರಿದುಬಂದಿದೆ.
ಶ್ರೀಲಂಕಾ, ಮಾಲ್ಡೀವ್ಸ್, ಇರಾನ್, ಸೆಶೆಲ್ಸ್, ನೈಜೀರಿಯಾ, ಕೀನ್ಯಾ ಮತ್ತು ಕೊಮೊರೊಸ್ ಅಧ್ಯಕ್ಷರು, ನೇಪಾಳ, ಬಾಂಗ್ಲಾದೇಶ, ಭೂತಾನ್, ಮ್ಯಾನ್ಮಾರ್, ಮಾರಿಷಸ್ನ ಪ್ರಧಾನಿಗಳು, ಕೆರಿಬಿಯನ್ ರಾಷ್ಟ್ರಗಳಾದ ಜಮೈಕಾ, ಬಾರ್ಬಡೋಸ್ ಮತ್ತು ದಕ್ಷಿಣ ಅಮೆರಿಕದ ಗಯಾನಾ ನಾಯಕರು ನರೇಂದ್ರ ಮೋದಿ (Narendra Modi) ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದರೊಂದಿಗೆ ಇಟಲಿ, ಜಪಾನ್ ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷರು, ಜಿ20 ರಾಷ್ಟ್ರಗಳ ನಾಯಕರು, ಆಗ್ನೇಯ ಏಷ್ಯಾದಿಂದ, ಸಿಂಗಾಪುರ ಮತ್ತು ಮಲೇಷ್ಯಾದ ಪ್ರಧಾನ ಮಂತ್ರಿಗಳು ಮೋದಿಗೆ ಶುಭಸಂದೇಶಗಳನ್ನು ಕಳುಹಿಸಿದ್ದಾರೆ.
543 ಸದಸ್ಯ ಬಲದ ಲೋಕಸಭೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಪಡೆದು 2019ರ ಚುನಾವಣೆಗಿಂತಲೂ 63 ಸ್ಥಾನಗಳಲ್ಲಿ ಕುಸಿತ ಕಂಡಿದ್ದರೆ, ಕಾಂಗ್ರೆಸ್ ಕಳೆದ ಬಾರಿಗಿಂತಲೂ 47 ಹೆಚ್ಚಿನ ಸ್ಥಾನಗಳನ್ನ ಗೆದ್ದುಕೊಂಡಿದ್ದು, 99 ಸ್ಥಾನಗಳಲ್ಲಿ ವಿಜಯ ಸಾಧಿಸಿದೆ. ಒಟ್ಟಾರೆಯಾಗಿ ಎನ್ಡಿಎ ಕೂಟ 291, ಇಂಡಿಯಾ ಒಕ್ಕೂಟ 234 ಹಾಗೂ ಇತರ ಪಕ್ಷಗಳು 18 ಸ್ಥಾನಗಳನ್ನ ಗೆದ್ದಿವೆ.