ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಂಡಮಾರುತದಿಂದಾಗಿ ಉತ್ತರ ಆಫ್ರಿಕಾದ ದೇಶ ಲಿಬಿಯಾದ ಪೂರ್ವ ಭಾಗದಲ್ಲಿ ಭಾರೀ ಮಳೆಯಾಗಿದ್ದು, ಯಮಸ್ವರೂಪಿ ಪ್ರವಾಹಕ್ಕೆ ಈವರೆಗೆ 5000ಕ್ಕೂ ಅಧಿಕ ಮಂದಿ ಬಲಿಯಾಗಿದ್ದು, ಹತ್ತು ಸಾವಿರಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಭಾರೀ ಮಳೆಯಿಂದಾಗಿ ಡ್ಯಾಂ ಒಡೆದು ಭೀಕರ ಪ್ರವಾಹ ಉಂಟಾಗಿದೆ. ಅದರ ಪರಿಣಾಮ ಈವರೆಗೆ ಐದು ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 10 ಸಾವಿರಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಚಂಡಮಾರುತ ಹಾಗೂ ಬಿರುಗಾಳಿಯಿಂದಾಗಿ ಡೇನಿಯಲ್ ಲಿಬಿಯಾದಲ್ಲಿ ಭಾರೀ ಹಾನಿಯನ್ನುಂಟುಮಾಡಿದೆ. ಡರ್ನಾ ನಗರದಲ್ಲಿ ಕಟ್ಟಡಗಳು ಮತ್ತು ರಸ್ತೆಗಳು ಹಾನಿಗೊಳಗಾಗಿವೆ. ಲಿಬಿಯಾ ಕರಾವಳಿಯಲ್ಲಿ ಕಟ್ಟಡಗಳು ನೆಲಕ್ಕುರುಳಿವೆ.