ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿಷೇಧಿತ ಜೈಶ್-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನ ಹೊಸ ಆಡಿಯೋ ವೈರಲ್ ಆಗಿದೆ. ಈ ಆಡಿಯೋದಲ್ಲಿ ಆತ ಭಾರತದ ಮೇಲೆ ದಾಳಿ ಮಾಡಲು ಸಾವಿರಾರು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧರಿದ್ದಾರೆ ಎಂದು ಹೇಳಿದ್ದಾನೆ.
ಮಸೂದ್ ಅಜರ್ ಯಾವುದೇ ಕ್ಷಣದಲ್ಲಿ ದಾಳಿ ಮಾಡಲು ಹೆಚ್ಚಿನ ಸಂಖ್ಯೆಯ ಆತ್ಮಹತ್ಯಾ ದಾಳಿಕೋರರು ಸಿದ್ಧರಾಗಿದ್ದಾರೆ ಮತ್ತು ಅವರು ಭಾರತಕ್ಕೆ ನುಸುಳಲು ಅವಕಾಶ ನೀಡುವಂತೆ ಅಜರ್ ಒತ್ತಾಯಿಸುತ್ತಿರುವುದು ಕೇಳಿಸುತ್ತದೆ. ತನ್ನ ಗುಂಪಿನ ಹೋರಾಟಗಾರರ ಸಂಖ್ಯೆಯನ್ನು ಬಹಿರಂಗಪಡಿಸಿದರೆ ಜಗತ್ತೇ ಬೆಚ್ಚಿಬೀಳುತ್ತದೆ ಎಂದು ಹೇಳಿದ್ದಾನೆ.
ಈ ಆತ್ಮಹತ್ಯೆ ಬಾಂಬ್ ದಾಳಿ ನಡೆಸುವವರ ಸಂಖ್ಯೆ ಒಬ್ಬರಲ್ಲ, ಇಬ್ಬರಲ್ಲ, ನೂರು ಕೂಡ ಅಲ್ಲ, ಸಹಸ್ರಕ್ಕೂ ಕಡಿಮೆ ಇಲ್ಲ. ನಾನು ನಿಮಗೆ ಸಂಪೂರ್ಣ ಸಂಖ್ಯೆಯನ್ನು ತಿಳಿಸಿದರೆ, ನಾಳೆ ಜಾಗತಿಕ ಮಾಧ್ಯಮದಲ್ಲಿ ಭಾರಿ ಅಲೆಯುಂಟಾಗುತ್ತದೆ ಎಂದು ಹೇಳಿದ್ದಾನೆ. ಈ ವ್ಯಕ್ತಿಗಳು ದಾಳಿಗಳನ್ನು ನಡೆಸಲು ಮತ್ತು ಹುತಾತ್ಮರಾಗಲು ಹೆಚ್ಚು ಪ್ರೇರೇಪಿತರಾಗಿದ್ದಾರೆ ಎಂದಿದ್ದಾನೆ. ಆದರೆ ಆಡಿಯೋ ರೆಕಾರ್ಡಿಂಗ್‌ನ ದಿನಾಂಕ ಮತ್ತು ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ. ಇದು ನಿಜವೇ, ಸುಳ್ಳೇ ಎಂಬುದು ತಿಳಿದುಬಂದಿಲ್ಲ.
ಅಜರ್ ಹಲವು ವರ್ಷಗಳಿಂದ ಭಾರತದ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾನೆ. ಈತ 2001ರ ಸಂಸತ್ತಿನ ದಾಳಿ ಮತ್ತು 2008ರ ಮುಂಬೈ ದಾಳಿ ಸೇರಿದಂತೆ ಹಲವು ಪ್ರಮುಖ ದಾಳಿಗಳ ಮಾಸ್ಟರ್ ಮೈಂಡ್ ಎನ್ನಲಾಗಿದೆ.

