ಕಲಬುರಗಿ ಜಿಲ್ಲೆಯಾದ್ಯಂತ ವಾಡಿಕೆಗಿಂತ ಅಧಿಕ ಮಳೆ ದಾಖಲು

ಹೊಸದಿಗಂತ ವರದಿ,ಕಲಬುರಗಿ:

ಕಲಬುರಗಿ ಜಿಲ್ಲೆಯಾದ್ಯಂತ ಕಳೆದ ಜನವರಿ ೧ರಿಂದ ಇಲ್ಲಿಯವರೆಗೆ ಆ.೧೮ರವರೆಗೆ ೪೦೯ ಮೀ. ಮೀ. ಮಳೆಯಾಗಬೇಕಿತ್ತು.ಆದರೆ, ೬೧೩ ಮೀ.ಮೀ.ಮಳೆಯಾಗಿದೆ.ಅಂದರೇ ಶೇಕಡಾ ೫೦ ಪ್ರತಿಶತ ಅಧಿಕ ಮಳೆಯಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲೆಯಾದ್ಯಂತ ಕಳೆದ ಜ.೧ರಿಂದ ಆ.೧೮ರವರೆಗೆ ಸುರಿದ ಮಳೆ ವಿವರಗಳು ಮೀ.ಮೀ.ಗಳಲ್ಲಿ ಈ ಕೆಳಕಂಡಂತಿದ್ದು, ಕಲಬುರಗಿ- ೪೦೯ ಮೀ.ಮೀ.ಆಗಬೇಕಿತ್ತು.೬೧೩ ಮೀ.ಮೀ.ಆಗಿದೆ.ಅಫಜಲಪುರ-೩೫೪.೯ ಮೀ.ಮೀ,೬೧೦.೫ ಮೀ.ಮೀ,ಆಳಂದ -೩೯೨.೭ ಮೀ.ಮೀ,೬೫೮.೭ ಮೀ.ಮೀ, ಚಿಂಚೋಳಿ -೫೦೨.೨ ಮೀ.ಮೀ,೪೬೬.೨ ಮೀ.ಮೀ, ಚಿತ್ತಾಪುರ -೪೧೯.೫ ಮೀ.ಮೀ,೬೮೧.೪ ಮೀ.ಮೀ, ಕಲಬುರಗಿ -೩೯೯.೯ ಮೀ.ಮೀ,೬೩೩.೭ ಮೀ.ಮೀ, ಜೇವರ್ಗಿ -೪೧೭ ಮೀ.ಮೀ,೬೦೬.೫ ಮೀ.ಮೀ, ಸೇಡಂ -೪೩೪ ಮೀ.ಮೀ,೬೭೮.೨ ಮೀ.ಮೀ,ಕಾಳಗಿ-೪೩೬.೩ ಮೀ.ಮೀ,೫೬೦.೯ ಮೀ.ಮೀ,ಕಮಲಾಪುರ -೪೨೦.೩ ಮೀ.ಮೀ,೬೨೯.೩ ಮೀ.ಮೀ, ಯಡ್ರಾಮಿ -೩೪೦.೫ ಮೀ.ಮೀ,೫೮೦.೧ ಮೀ.ಮೀ ಹಾಗೂ ಶಹಾಬಾದ್ -೩೯೮.೮ ಮೀ.ಮೀ.ಮಳೆಯಾಗಬೇಕಿತ್ತು.ಆದರೆ,ವಾಡಿಗೆಕಿಂತ ಅಧಿಕ ೬೪೨.೯ ಮೀ.ಮೀ.ಮಳೆಯಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಕಲಬುರಗಿ ಆರೇಂಜ್ ಅಲರ್ಟ್ -ಎಚ್ಚರಿಕೆ

ಕಲಬುರಗಿ ಜಿಲ್ಲೆಯಾದ್ಯಂತ ಕಳೆದ ಹಲವು ದಿನಗಳಿಂದ ವಿಪರೀತ ಮಳೆಯಾಗುತ್ತಿದ್ದು, ಕಲಬುರಗಿ ಜಿಲ್ಲೆಯಾದ್ಯಂತ ಆರೇಂಜ್ ಅಲರ್ಟ್ ಘೋಷಣೆಯಾಗಿದ್ದು, ಮುನ್ನೆಚ್ಚರಿಕೆಯಿಂದ ಇರುವಂತೆ ಕಲಬುರಗಿ ಜಿಲ್ಲಾಡಳಿತ ತಿಳಿಸಿದೆ.ರಾಜ್ಯದ ಉಡುಪಿ,ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಅತ್ಯಧಿಕ (೨೦೪.೫ ಮೀ.ಮೀ ಮಳೆಯಾಗುವ ಸಂಭವವಿದೆ ಹೀಗಾಗಿ ರೆಡ್ ಅಲರ್ಟ್ ಘೋಷಿಸಲಾಗಿದೆ.ಅದರಂತೆ ದಕ್ಷಿಣ ಕನ್ನಡ,ಕೊಡಗು,ಹಾಸನ, ಬೆಳಗಾವಿ, ವಿಜಯಪುರ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಅತಿ ಭಾರಿ (೧೧೫.೬ ಮೀ.ಮೀ.ನಿಂದ ೨೦೪.೫ ಮೀ.ಮೀ)ವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿ, ಎಚ್ಚರಿಕೆ ವಹಿಸುವಂತೆ ನಿರ್ದೇಶನ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!