ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಪ್ಪಾ…ಇಷ್ಟೊಂದು ಪರಿಣಾಮವೇ…? ನಮಗೆ ಗೊತ್ತೇ ಇಲ್ಲಾರೀ… ಹೌದು ಈ ಸ್ಟೋರಿ ಓದಿದ್ರೆ ಈ ಪ್ರಶ್ನೆ ನಿಮ್ಮಲ್ಲಿ ಮೂಡದೇ ಇರದು! ನಾವು ನೀವೆಲ್ಲಾ ಅಡುಗೆಯಲ್ಲಿ ಬಳಸುವ ಎಲ್ಲರೂ ಇಷ್ಟಪಡುವ ಅದ್ಭುತ ರುಚಿ ಹೊಂದಿದ ಸೊಪ್ಪು, ತರಕಾರಿ ಈ ನುಗ್ಗೆ. ಹಲವು ಔಷಧೀಯ ಗುಣಹೊಂದಿದ ನುಗ್ಗೆ ಉತ್ತಮ ಆರೋಗ್ಯಕ್ಕೆ ಹಲವು ಸಹಕಾರ ನೀಡುತ್ತದೆ. ಪ್ರಾಚೀನ ಕಾಲದಿಂದಲೂ ನುಗ್ಗೆ ಬಳಕೆ ನಮ್ಮದೇಶದಲ್ಲಿದೆ. ಇದರ ಸೊಪ್ಪು ಔಷಧವಾಗಿ ಬಳಕೆಯಾಗುತ್ತದೆ. ನುಗ್ಗೆ ಸೊಪ್ಪು, ಕೋಡುಗಳನ್ನು ಅಡುಗೆಗೆ ಬಳಸುತ್ತಾರೆ. ಇದೊಂದು ಸೂಪರ್ ಫುಡ್ ಅಂದರೆ ತಪ್ಪಲ್ಲ.
ಚರ್ಮರೋಗಗಳ ಔಷಧಿ ತಯಾರಿಕೆಗೆ ನುಗ್ಗೇಸೊಪ್ಪು ಬಳಕೆಯಾಗುತ್ತದೆ. ಸೋಂಕುಗಳಿಗೆ ಚಿಕಿತ್ಸೆ ನೀಡಲು ಈ ಸೊಪ್ಪು ಬಳಸುತ್ತಾರೆ. ನುಗ್ಗೆ ಸೊಪ್ಪಿನಲ್ಲಿ ಆಂಟಿ ಫಂಗಲ್, ಆಂಟಿ ವೈರಲ್ ಅಂಶ ಹೇರಳವಾಗಿದೆ. ದೇಹದ ತೂಕ ನಷ್ಟಮಾಡಲು ಹಾಗೂ ಮಧುಮೇಹ ನಿಯಂತ್ರಣಕ್ಕೆ ನುಗ್ಗೇ ಸೊಪ್ಪು ಬಳಕೆಮಾಡುತ್ತಾರೆ. ನುಗ್ಗೇ ಸೊಪ್ಪನ್ನು ಜಗಿಯುವುದು, ಅಡುಗೆಯಲ್ಲಿ ಬಳಸುವುದು, ನುಗ್ಗೇಸೊಪ್ಪಿನ ಚಹಾ ಸೇವಿಸುವುದರಿಂದ ರಕ್ತದಲ್ಲಿರುವ ಸಕ್ಕರೆ ಅಂಶ ನಿಯಂತ್ರಣಕ್ಕೆ ಬರುತ್ತದೆ.
ನುಗ್ಗೆ ಸೊಪ್ಪು ರಕ್ತದೊತ್ತಡ ಕಡಿಮೆ ಮಾಡುತ್ತದೆ. ನುಗ್ಗೆ ಸೊಪ್ಪಿನಲ್ಲಿ ಹೇರಳವಾಗಿ ವಿಟಮಿನ್ ಸಿ ಅಂಶವಿದೆ. ರೋಗ ನಿರೋಧಕ ಶಕ್ತಿಯನ್ನು ದೇಹದಲ್ಲಿ ವೃದ್ಧಿಸಿ ದೇಹಾರೋಗ್ಯ ಹೆಚ್ಚಿಸುತ್ತದೆ. ಇದರೊಂದಿಗೆ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಉತ್ತಮಪಡಿಸುತ್ತದೆ.