ನಮ್ಮ ಮನೆಬಾಗಿಲಿನಲ್ಲೇ ಬೆಳೆದು ನಿಂತಿರುವ ನುಗ್ಗೆ ಗಿಡವನ್ನು ನಾವು ಅಷ್ಟಾಗಿ ಗಮನಿಸುವುದಿಲ್ಲ. ನುಗ್ಗೆಕಾಯಿ ಅಡುಗೆಗೆ ಬಂದರೆ ಸಾಕು, ಗಿಡದ ಮಹತ್ವ ಅಲ್ಲಿಗೇ ಸೀಮಿತವಾಗುತ್ತದೆ. ಆದರೆ ಆಯುರ್ವೇದದ ದೃಷ್ಟಿಯಲ್ಲಿ ನೋಡಿದರೆ, ನುಗ್ಗೆ ಗಿಡವು ಬೇರುಗಳಿಂದ ಹಿಡಿದು ಹೂವಿನವರೆಗೆ ಔಷಧೀಯ ಗುಣಗಳಿಂದ ತುಂಬಿರುವ ಅಪರೂಪದ ವನೌಷಧಿ. ಸರಳವಾಗಿ ಹೇಳಬೇಕೆಂದರೆ, ಇದು ಪ್ರಕೃತಿ ಕೊಟ್ಟ ಉಚಿತ ಆರೋಗ್ಯ ಪ್ಯಾಕೇಜ್.
- ನುಗ್ಗೆ ಸೊಪ್ಪನ್ನು ಪೋಷಕಾಂಶಗಳ ಉಗ್ರಾಣವೆಂದೇ ಕರೆಯಬಹುದು. ಕೇವಲ 100 ಗ್ರಾಂ ನುಗ್ಗೆ ಸೊಪ್ಪಿನಲ್ಲಿ ಕಿತ್ತಳೆ ಹಣ್ಣಿಗಿಂತ ಏಳು ಪಟ್ಟು ಹೆಚ್ಚು ವಿಟಮಿನ್ C ಇದೆ. ಜೊತೆಗೆ ವಿಟಮಿನ್ K, ವಿಟಮಿನ್ E, ಮೆಗ್ನೀಷಿಯಂ, ಮ್ಯಾಂಗನೀಸ್ ಮತ್ತು ಆಂಟಿ ಆಕ್ಸಿಡೆಂಟ್ಸ್ ಸಮೃದ್ಧವಾಗಿವೆ. ಫೈಬರ್ ಹೆಚ್ಚು, ಕ್ಯಾಲೋರಿಗಳು ಕಡಿಮೆ ಇರುವುದರಿಂದ ತೂಕ ನಿಯಂತ್ರಣಕ್ಕೂ ಇದು ಉತ್ತಮ.
- ಟೈಫಾಯ್ಡ್ ಅಥವಾ ದೀರ್ಘಕಾಲದ ಜ್ವರದಿಂದ ಬಳಲುವವರು ನುಗ್ಗೆ ಗಿಡದ ಬೇರುಗಳನ್ನು ನೀರಿನಲ್ಲಿ ಕುದಿಸಿ ಕುಡಿದರೆ ಶಕ್ತಿ ಹೆಚ್ಚಾಗುತ್ತದೆ. ದೈಹಿಕ ದೌರ್ಬಲ್ಯವಿದ್ದರೆ ನುಗ್ಗೆ ಹೂವಿನ ಕಷಾಯ ಉಪಯುಕ್ತ.
- ನುಗ್ಗೆ ಎಲೆಗಳನ್ನು ಅರೆದು ತಲೆಗೆ ಹಚ್ಚಿದರೆ ತಲೆನೋವು ಕಡಿಮೆಯಾಗುತ್ತದೆ. ಸಂಧಿವಾತ ನೋವಿಗೆ ಇದು ಉತ್ತಮ ನೈಸರ್ಗಿಕ ಪರಿಹಾರ.
- ನುಗ್ಗೆ ಬೇರುಗಳಿಂದ ಮಾಡಿದ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಗಂಟಲು ನೋವು ಶಮನವಾಗುತ್ತದೆ. ಎಲೆಗಳನ್ನು ಅಗಿಯುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ.
- ನುಗ್ಗೆ ಸೊಪ್ಪು ಲಿವರ್ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹದ ಒಳಗಿನ ವಿಷಾಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)


