ಮಳೆಗಾಲದಲ್ಲಿ ಸೊಳ್ಳೆ ಕಾಟ ಹೆಚ್ಚಾಗಿ ಮಧ್ಯಾಹ್ನವೇ ಕಿಟಕಿ ಬಾಗಿಲುಗಳನ್ನು ಮುಚ್ಚಿಬಿಡ್ತೀವಿ, ಇನ್ನು ಸೊಳ್ಳೆ ಕಾಟಕ್ಕೆ ಹೈರಾಣಾಗಿ ಕಾಯಿಲ್, ಮ್ಯಾಟ್, ಓಡೋಮಸ್ ಮೊರೆ ಹೋಗ್ತೀವಿ. ಅದೂ ಸಾಲದಿದ್ರೆ ಜೋರಾಗಿ ಫ್ರಾನ್ ಹಾಕಿಕೊಂಡು ಕೂರ‍್ತೀವಿ. ಮನೆಯಲ್ಲಿ ಸಿಗುವ ಈ ವಸ್ತುಗಳನ್ನು ಬಳಸಿ ಸೊಳ್ಳೆಗಳನ್ನು ಓಡಿಸಬಹುದು..
- ನಿಂಬೆ ನೀಲಗಿರಿ ಎಣ್ಣೆಯನ್ನು ಕೈಕಾಲಿಗೆ ಹಚ್ಚಿಕೊಂಡ್ರೆ ಸೊಳ್ಳೆ ನಿಮ್ಮ ಬಳಿ ಬರೋದಿಲ್ಲ.
- ಲಾವೆಂಡರ್ ಹೂವಿನ ವಾಸನೆ ಸೊಳ್ಳೆಗಳಿಗೆ ಇಷ್ಟ ಇಲ್ಲ, ಮನೆಯಲ್ಲಿ ಲಾವೆಂಡರ್ ಸ್ಪ್ರೇ ಅಥವಾ ಲಾವೆಂಡರ್ ಹೂವುಗಳನ್ನು ಜಜ್ಜಿ ಮನೆಯ ಕೆಲ ಭಾಗಗಳಲ್ಲಿ ಇಟ್ಟರೆ ಸೊಳ್ಳೆ ಬರೋದಿಲ್ಲ.
- ಚಕ್ಕೆ ಎಣ್ಣೆ, ನೀಮ್ ಎಣ್ಣೆಯನ್ನು ಬಳಕೆ ಮಾಡಬಹುದು.
- ಕರ್ಪೂರ ಹಾಗೂ ಬೇವಿನ ಎಲೆಯ ಹೊಗೆಯನ್ನು ಹಾಕಿದರೆ ಸೊಳ್ಳೆ ಓಡಿಹೋಗುತ್ತವೆ.
- ಬೆಳ್ಳುಳ್ಳಿ ಜಜ್ಜಿ ನೀರಿನಲ್ಲಿ ಕುದಿಸಿ ಅದರ ನೀರನ್ನು ಎಲ್ಲೆಡೆ ಸಿಂಪಡಿಸಿ, ಸೊಳ್ಳೆಗಳಿಗೆ ಇದರ ವಾಸನೆ ಕಂಡ್ರೆ ಆಗೋದಿಲ್ಲ.
- ನಿಂಬೆಹಣ್ಣನ್ನು ಅರ್ಧಕ್ಕೆ ಕತ್ತರಿಸಿ ಅದರೊಳಗೆ ಲವಂಗ ಇಟ್ಟು ಪ್ರತಿ ರೂಮ್‌ನಲ್ಲಿಯೂ ಇಡಿ, ವಾಸನೆಗೆ ಸೊಳ್ಳೆ ಬರೋದಿಲ್ಲ.