ಸಿಲಿಕಾನ್ ಸಿಟಿಯಲ್ಲಿ ಸೊಳ್ಳೆಗಳ ಹಾವಳಿ, ಡೆಂಗ್ಯೂ ಕೇಸ್ ಹೆಚ್ಚಳ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ಬೆಂಗಳೂರಿನಲ್ಲಿ ಆಗಾಗ್ಗೆ ಮಳೆಯಾಗುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸೊಳ್ಳೆಗಳು ಹೆಚ್ಚಾದಂತೆ ಡೆಂಗ್ಯೂ ಜ್ವರ ಹೆಚ್ಚಳವಾಗಿದೆ. ಕಳೆದ 11 ದಿನದಲ್ಲಿ 178ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ.

ಸೊಳ್ಳೆಗಳಿಂದ ಹರಡುವ ಡೆಂಗ್ಯೂ ಬಂದಿದೆ ಎಂದು ತಿಳಿಯೋದು ಹೇಗೆ?
ಜ್ವರ
ತಲೆನೋವು
ಮೈಕೈನೋವು
ಹಸಿವಾಗದೇ ಇರುವುದು
ವಾಕರಿಕೆ, ವಾಂತಿ
ಸುಸ್ತು, ಗಂಟಲು ನೋವು
ಕಣ್ಣು ನೋವು
ದೇಹದಲ್ಲಿ ಕೆಂಪು ಕಲೆಗಳು
ಉಸಿರಾಟದ ತೊಂದರೆ
ಮೂರ್ಛೆ
ಮೂತ್ರ ವಿಸರ್ಜನೆ ಮಾಡದಿರುವುದು
ಜಾಂಡೀಸ್
ದೇಹದ ಯಾವುದೇ ಭಾಗದಿಂದ ರಕ್ತಸ್ರಾವ
ಕಪ್ಪು ಮಲ

ತಡೆಗಟ್ಟುವುದು ಹೇಗೆ?
ಮನೆಯ ಸುತ್ತಮುತ್ತ ಗಲೀಜು, ನೀರು ನಿಲ್ಲುವ ಸಾಧ್ಯತೆ ಇರುವ ಯಾವ ವಸ್ತುವನ್ನೂ ಹಾಗೇ ಬಿಡಬೇಡಿ
ಸಂಜೆಯೊಳಗೆ ಕಿಟಕಿ ಬಾಗಿಲುಗಳನ್ನು ಹಾಕಿಬಿಡಿ
ಮಕ್ಕಳಿಗೆ ಉದ್ದ ತೋಳಿನ ಬಟ್ಟೆ ಹಾಗೂ ಪ್ಯಾಂಟ್ ತೊಡಿಸಿ
ಮೈಗೆ ಕೊಬ್ಬರಿ ಎಣ್ಣೆ ಹಚ್ಚಿಬಿಡಿ
ಸೊಳ್ಳೆ ಬತ್ತಿ ಅಥವಾ ಕಾಯಿಲ್ ಬಳಸಿ
ರಿಪೆಲ್ಲೆಂಟ್, ಕ್ರೀಂಗಳನ್ನು ಬಳಸಬಹುದು.

ಯಾವ ಆಹಾರ ಸೇವಿಸಬೇಕು?
ಕಿತ್ತಳೆ, ನಿಂಬೆ, ಮೂಸಂಬಿ ವಿಟಮಿನ್ ಸಿ ಇರುವ ಹಣ್ಣುಗಳು
ಶುಂಠಿ
ಮೊಸರು
ಪಾಲಕ್
ಬಾದಾಮಿ
ಅರಿಶಿಣ
ಬೆಳ್ಳುಳ್ಳಿ

ಡೆಂಗ್ಯೂ ಲಕ್ಷಣಗಳು ಕಾಣಿಸಿದರೆ ತಡಮಾಡದೆ ವೈದ್ಯರನ್ನು ಭೇಟಿ ಮಾಡಿ ರಕ್ತ ಪರೀಕ್ಷೆಗೆ ಒಳಗಾಗಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!