ಹೊಸದಿಗಂತ ಡಿಜಿಟಲ್ ಡೆಸ್ಕ್
ಹಿಜಾಬ್ ವಿವಾದದ ಸಮಯದಲ್ಲಿ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಪರ ಅಲ್ ಖೈದಾ ನಾಯಕ ಜವಾಹಿರಿ ಬ್ಯಾಟಿಂಗ್ ಮಾಡಿದ್ದು, ಭಾರತದ ಶ್ರೇಷ್ಠ ಮಹಿಳೆ ಎಂದು ಕೊಂಡಾಡಿದ್ದಾನೆ.
ಈ ಮೂಲಕ ಕರ್ನಾಟಕದ ಹಿಜಾಬ್ ವಿವಾದದ ಬಗ್ಗೆ ಆಲ್ ಖೈದ ಕೂಡ ಮೂಗು ತೂರಿಸಿದೆ.
ಉಗ್ರ ಆಲ್-ಖೈದಾ ಮುಖ್ಯಸ್ಥ ಜವಾಹಿರಿ ತನ್ನ ಕವನದಲ್ಲಿ ಮುಸ್ಕಾನ್‌ಳನ್ನು ಭಾರತದ ಶ್ರೇಷ್ಠ ಮಹಿಳೆ ಹಾಗೂ ಇಸ್ಲಾಂ ಮಗಳೆಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೋಸ್ಟ್ ವಾಂಟೆಂಡ್ ಉಗ್ರ ಜವಾಹರಿ, ಕವನವನ್ನು ರಚಿಸಿ, ಆ ಕವನದಲ್ಲಿ ಮುಸ್ಕಾನ್ ಬಗ್ಗೆ ಹೊಗಳಿದ್ದಾನೆ. ಅಲ್ಲದೇ ಇವಳಿಂದ ತುಂಬಾ ಮುಸ್ಕಾನ್ ವೀಡಿಯೋ ನೋಡಿದವರು ಪ್ರಭಾವಿತರಾಗಿದ್ದಾರೆ ಎಂಬುದಾಗಿಯೂ ತಿಳಿಸಿದ್ದಾನೆ.
ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಹಿಂದು ವಿದ್ಯಾರ್ಥಿಗಳು ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಪ್ರತಿಯಾಗಿ ವಿದ್ಯಾರ್ಥಿನಿ ಮುಸ್ಕಾನ ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿದ್ದಳು.