ಹೊಸದಿಗಂತ ಡಿಜಿಟಲ್ ಡೆಸ್ಕ್;
ಚಿಕ್ಕಬಳ್ಳಾಪುರದಲ್ಲಿ ಮೋಸ್ಟ್ ವಾಂಟೇಡ್ ಕಿಡ್ನಾಪರ್ ಬಾಂಬೆ ಸಲೀಂ ಸೇರಿದಂತೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆತ ಸೌತ್ ಇಂಡಿಯಾದಲ್ಲೇ ದಿ ಮೋಸ್ಟ್ ವಾಟೆಂಡ್ ಕ್ರಿಮಿನಲ್, ಆತನ ಮೇಲೆ ಒಂದಲ್ಲ ಎರಡಲ್ಲ 40 ಕ್ಕೂ ಹೆಚ್ಚು ಮನೆಗಳ್ಳತನ, 20ಕ್ಕೂ ಹೆಚ್ಚು ಕಿಡ್ಯ್ನಾಪ್, 5 ಕೊಲೆ ಕೇಸ್ ಸೇರಿದಂತೆ ಹಲವು ಪ್ರಕರಣಗಳಿವೆ. ಆ ಮೋಸ್ಟ್ ವಾಟೆಂಡ್ ಕಿಡ್ನ್ಯಾಪರ್ ಆಗಿರುವ ಬಾಂಬೆ ಸಲೀಂ ಸೇರಿದಂತೆ 7 ಆರೋಪಿಗಳನ್ನು ಬಂಧಿಸುವಲ್ಲಿ ರಾಜ್ಯದ ಬಾಗೇಪಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಿಡ್ಯ್ನಾಪ್ ಪ್ರಕರಣ ಸಂಬಂಧ, ಸದ್ಯ ಬಾಂಬೆ ಸಲೀಂ ಜೊತೆ ಆಂಧ್ರಪ್ರದೇಶದ ಚಿಲಮತ್ತೂರಿನ ಅನಿಲ್, ರಾಜಾನುಕುಂಟೆಯ ಚೇತನ್, ರಾಜಾನುಕುಂಟೆಯ ರೌಡಿಶೀಟರ್ ನಾಗೇಶ್, ಬಾಗೇಪಲ್ಲಿಯ ರೌಡಿಶೀಟರ್ ಚೇತನ್, ಗುಡಿಬಂಡೆಯ ರೌಡಿಶೀಟರ್ ಬಾಬುರೆಡ್ಡಿ, ಬೆಂಗಳೂರಿನ ರೌಡಿಶೀಟರ್ ವಾಸಿಮ್ ಹಾಗೂ ಅಸ್ಲಾಂ ಎಂಬುವವರನ್ನ ಕೇರಳ ರಾಜ್ಯದಲ್ಲಿ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇನ್ನೂ ಬಂಧಿತರ ಬಳಿ ಕೃತ್ಯಕ್ಕೆ ಬಳಿಸಿದ ಹೊಸ ಇನ್ನೋವಾ ಹೈಕ್ರಾಸ್ ಕಾರು, ಸೇರಿದಂತೆ ಮೂರು ಬೈಕ್ ಹಾಗೂ ಐದು ಲಕ್ಷ 30 ಸಾವಿರ ರೂ ನಗದು ವಶಪಡಿಸಿಕೊಂಡಿದ್ದಾರೆ.
ಈತ ಇದುವರೆಗೂ 40ಕ್ಕೂ ಹೆಚ್ಚು ಮನೆಗಳ್ಳತನ, 20ಕ್ಕೂ ಹೆಚ್ಚು ಕಿಡ್ಯ್ನಾಪ್ ಸೇರಿದಂತೆ 5 ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನಂತೆ. ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಕುಖ್ಯಾತಿ ಪಡೆದಿರುವ ಇಂತಹ ನಟೋರಿಯಸ್ ಕಿಡ್ಯ್ನಾಪರ್ನನ್ನ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.