ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಒರೆಗಾನ್‌ನಲ್ಲಿ ನೆಲೆಸಿದ್ದ ಭಾರತ ಮೂಲದ ತಾಯಿ ಮಗಳು ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಸಿಗ್ನಲ್‌ನಲ್ಲಿ ನಿಲ್ಲಿಸದೇ ಕಾರನ್ನು ಚಲಾಯಿಸಿಕೊಂಡು ಹೋಗಿದ್ದು ಅಪಘಾತಕ್ಕೆ ಕಾರಣವಾಗಿದೆ. ಗೀತಾಂಜಲಿ ಹಾಗೂ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗೀತಾಂಜಲಿ, ನರೇಶ್‌ಬಾಬು ಆಂಧ್ರ ಮೂಲದವರು. ತಮ್ಮ ಇಬ್ಬರು ಮಕ್ಕಳ ಜೊತೆ ಗೀತಾಂಜಲಿ ಅವರ ಜನ್ಮದಿನವನ್ನು ಆಚರಿಸಲು ದೇವಸ್ಥಾನಕ್ಕೆ ತೆರಳಿದ್ದ ವೇಳೆ ಅಪಘಾತ ಸಂಭವಿಸಿದೆ. ಹುಟ್ಟಿದ ದಿನವೇ ಗೀತಾಂಜಲಿ ಮರಣ ಹೊಂದಿದ್ದಾರೆ. ಪುತ್ರ ಹಾಗೂ ನರೇಶ್ ಬಾಬು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.