ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಕಾಶ್ಮೀರದ ತ್ರಾಲ್ (Tral) ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಸಾವನ್ನಪ್ಪಿದ್ದಾರೆ. ಈ ಪೈಕಿ ಓರ್ವ ಉಗ್ರ ಸಾಯುವ ಮುನ್ನ ತನ್ನ ಕುಟುಂಬಸ್ಥರಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾನೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಉಗ್ರ ಅಮೀರ್ ನಜೀರ್ ಎಕೆ-47 ಗನ್ ಹಿಡಿದುಕೊಂಡು ಮನೆಯೊಂದರಲ್ಲಿ ಅಡಗಿ ಕುಳಿತಿದ್ದ. ಈ ವೇಳೆ ಮನೆಗೆ ವಿಡಿಯೋ ಕಾಲ್ ಮಾಡಿದ್ದಾನೆ. ತಾಯಿ ಹಾಗೂ ಸಹೋದರಿ ಜೊತೆ ಮಾತನಾಡಿದ್ದು, ಸಹೋದರನ ಬಗ್ಗೆ ವಿಚಾರಿಸಿದ್ದಾನೆ. ಈ ವೇಳೆ ತಾಯಿ ನೀನು ಶರಣಾಗಿ, ನಿನ್ನ ಜೀವ ಉಳಿಸಿಕೋ ಎಂದು ಬೇಡಿಕೊಂಡಿದ್ದಾರೆ. ಜೊತೆಗೆ ಆತನ ಕುಟುಂಬಸ್ಥರು ಕೂಡ ಮನವಿ ಮಾಡಿಕೊಂಡಿದ್ದಾರೆ. ಆದರೆ ಅಮೀರ್, ಸೇನೆ ಮುಂದೆ ಬರಲಿ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ.
ವಿಡಿಯೋ ಕರೆಯಲ್ಲಿ ಉಗ್ರನ ತಾಯಿ ಮತ್ತು ಸಹೋದರಿ ಅವನಿಗೆ ಪದೇ ಪದೇ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗುವಂತೆ ಮನವಿ ಮಾಡಿದ್ದಾರೆ.ತಾಯಿ ಕಣ್ಣೀರಿಡುತ್ತಾ ಶರಣಾಗುವಂತೆ ಸೂಚಿಸುತ್ತಾರೆ. ಈ ವೇಳೆ ಸೇನೆ ಬರಲಿ ನೋಡೋಣ ಎನ್ನುವ ಉತ್ತರ ನೀಡಿದ್ದಾರೆ.
ವಿಡಿಯೋ ಕರೆಯ ಸಮಯದಲ್ಲಿ ಆಮಿರ್ ತನ್ನ ತಾಯಿ ಮತ್ತು ಸಹೋದರಿಯೊಂದಿಗೆ ಮಾತ್ರವಲ್ಲದೆ ತನ್ನ ಸಹ ಭಯೋತ್ಪಾದಕ ಆಸಿಫ್ ಅಹ್ಮದ್ ಶೇಕ್ ಅವರ ಸಹೋದರಿಯೊಂದಿಗೂ ಮಾತನಾಡಿದ್ದಾನೆ. ಈ ವೇಳೆ ಕುಟುಂಸ್ಥರು ತಮ್ಮ ಸಹೋದರನ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ. ಅವರು ಅಡಗಿಕೊಂಡಿದ್ದ ಮನೆಯಿಂದಲೇ ಈ ಕರೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಸೇನೆ ಈ ಉಗ್ರರ ಹುಡುಕಿ ಹತ್ಯೆ ಮಾಡಿದೆ.
ಈ ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದಾರೆ. ಆಮಿರ್ ನಜೀರ್ ವಾನಿ, ಆಸಿಫ್ ಅಹ್ಮದ್ ಶೇಕ್ ಮತ್ತು ಯಾವರ್ ಅಹ್ಮದ್ ಭಟ್, ಮೂವರೂ ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದವರು. ಇವರು ಪುಲ್ವಾಮಾ ಜಿಲ್ಲೆಯ ನಿವಾಸಿಗಳು. ಭದ್ರತಾ ಪಡೆಗಳು ಮೊದಲು ಅವರಿಗೆ ಶರಣಾಗಲು ಅವಕಾಶ ನೀಡಿತ್ತು. ಆದರೆ ಭಯೋತ್ಪಾದಕರು ಪ್ರತಿಯಾಗಿ ಗುಂಡಿನ ದಾಳಿ ನಡೆಸಿದರು ಎಂದು ಹೇಳಲಾಗುತ್ತಿದೆ.