January17, 2026
Saturday, January 17, 2026
spot_img

ಬಾತ್ ಟಬ್‌ನಲ್ಲಿ ಮೂವರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೈದರಾಬಾದ್ ಮಹಿಳೆಯು ತನ್ನ ಮೂವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸೌದಿ ಅರೇಬಿಯಾದ ಅಲ್ ಖೋಬರ್‌ನಲ್ಲಿ ನಡೆದಿದೆ.

ಅವಳಿ ಪುತ್ರರಾದ ಸಾದಿಕ್ ಅಹ್ಮದ್ (7), ಅಡೆಲ್ ಅಹ್ಮದ್ (7) ಮತ್ತು ಯೂಸುಫ್ ಅಹ್ಮದ್ (3) ಮೃತಪಟ್ಟಿದ್ದಾರೆ. ಹೈದರಾಬಾದ್‌ನ ಮೊಹಮ್ಮದಿ ಲೈನ್ಸ್ ನಿವಾಸಿಯಾಗಿದ್ದ ಸಯ್ಯದಾ ಹುಮೇರಾ ಅಮ್ರೀನ್ ತನ್ನ ಮೂವರು ಗಂಡು ಮಕ್ಕಳನ್ನು ಬಾತ್‌ಟಬ್‌ನಲ್ಲಿ ಮುಳುಗಿಸಿ ಕೊಂದು, ಬಳಿಕ ತಾನೂ ಆತ್ಮಹತ್ಯೆ ಯತ್ನಿಸಿದ್ದಾರೆ. 

ಪತಿ ಮೊಹಮ್ಮದ್ ಶಹನವಾಜ್ ಅವರು ಸೌದಿಯಲ್ಲಿ ಉದ್ಯೋಗದಲ್ಲಿದ್ದರು. ಹೀಗಾಗಿ ಅಮ್ರೀನ್ ಅವರು ಪತಿಯನ್ನು ಭೇಟಿಯಾಗಲು ಕೆಲ ದಿನಗಳ ಹಿಂದೆ ಸೌದಿಗೆ ತೆರಳಿದ್ದರು. ಪತಿ ಕೆಲಸಕ್ಕೆ ತೆರಳಿದ್ದ ವೇಳೆ ಮಕ್ಕಳನ್ನು ಕೊಂದು, ತಾನೂ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಪತಿ ಕೆಲಸದಿಂದ ಹಿಂದಿರುಗಿದಾಗ ಘಟನೆ ಬೆಳಕಿಗೆ ಬಂದಿದೆ. 

ಪ್ರಾಥಮಿಕ ವರದಿಯ ಪ್ರಕಾರ, ಅಮ್ರೀನ್ ಅವರು ಕೆಲ ಸಮಯದಿಂದ ಮಾನಸಿಕ ಖಿನ್ನತೆ ಒಳಗಾಗಿದ್ದರು. ಅಲ್ಲದೇ ಕೌಟುಂಬಿಕ ಕಲಹದಿಂದ ಬೆಸತ್ತಿದ್ದರು ಎನ್ನಲಾಗಿದೆ. ಘಟನೆಯ ಹಿಂದಿನ ನಿಖರವಾದ ಕಾರಣ ತಿಳಿದುಬಂದಿಲ್ಲ. ಸೌದಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Must Read

error: Content is protected !!