ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ನಲ್ಲಿ ನಡೆದ ಉಗ್ರದಾಳಿ ಬಳಿಕ ಭಾರತ ಸರ್ಕಾರದ ಗಡಿಪಾರು ನಿರ್ಧಾರದಿಂದಾಗಿ ಪಾಕ್ ಮೂಲದ ಪ್ರಜೆಗಳನ್ನು ವಾಪಸ್ ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತಿದೆ.
ಜಮ್ಮು ಮತ್ತು ಕಾಶ್ಮೀರ ಅಧಿಕಾರಿಗಳು ಮಂಗಳವಾರ 60 ಪಾಕಿಸ್ತಾನಿ ಪ್ರಜೆಗಳ ಗಡೀಪಾರು ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ.
ಇದರಲ್ಲಿ ಹೆಚ್ಚಿನವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಸ್ಥಳೀಯರಾಗಿದ್ದು, ಅವರಲ್ಲಿ ಒಬ್ಬರು ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ಪೊಲೀಸ್ ಅಧಿಕಾರಿಯ ತಾಯಿ ಕೂಡ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿವಿಧ ಜಿಲ್ಲೆಗಳಿಂದ ಸಂಗ್ರಹಿಸಿ ಪಂಜಾಬ್‌ಗೆ ಬಸ್‌ಗಳಲ್ಲಿ ಕರೆದೊಯ್ಯಲಾಗಿದೆ. ಅಲ್ಲಿ ಅವರನ್ನು ವಾಘಾ ಗಡಿಯಲ್ಲಿ ಪಾಕಿಸ್ತಾನಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಅವರು ಹೇಳಿದರು.
ಮೇ 2022 ರಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುವಾಗ ನಿಧನರಾದ ವಿಶೇಷ ಪೊಲೀಸ್ ಅಧಿಕಾರಿ ಮುದಾಸಿರ್ ಅಹ್ಮದ್ ಶೇಖ್ ಅವರ ತಾಯಿ ಶಮೀಮಾ ಅಖ್ತರ್ ಕೂಡ ಗಡಿಪಾರು ಮಾಡಲ್ಪಟ್ಟವರಲ್ಲಿ ಒಬ್ಬರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಮುದಾಸಿರ್ ಅವರು ವಿದೇಶಿ ಭಯೋತ್ಪಾದಕರ ಗುಂಪನ್ನು ತಡೆದ ಜಮ್ಮು ಮತ್ತು ಕಾಶ್ಮೀರ ಪೊಲೀಸರ ರಹಸ್ಯ ಕಾರ್ಯಕರ್ತರ ತಂಡದ ಭಾಗವಾಗಿದ್ದರು. ಮುದಾಸಿರ್ ಶೇಖ್ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರ ನೀಡಲಾಗಿತ್ತು. ಮುದಸಿರ್ ಪತ್ನಿ ಶಮೀಮಾ, ಅವರು ಮೇ 2023 ರಲ್ಲಿ ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದರು. ಮುಖ್ಯ ಬಾರಾಮುಲ್ಲಾ ಪಟ್ಟಣದ ಚೌಕವನ್ನು ಪೊಲೀಸ್ ಅಧಿಕಾರಿಯ ನೆನಪಿಗಾಗಿ ಶಹೀದ್ ಮುದಾಸಿರ್ ಚೌಕ್ ಎಂದು ಹೆಸರಿಸಲಾಗಿದೆ.
ಇತ್ತ ನನ್ನ ಅತ್ತಿಗೆ ಇಲ್ಲಿಗೆ ಬಂದಾಗ 20 ವರ್ಷ ವಯಸ್ಸಿನವಳಾಗಿದ್ದಳು ಮತ್ತು ಈಗ 45 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದಾಳೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ನನ್ನ ಮನವಿ ಏನೆಂದರೆ ಅವರು ಗಡಿಪಾರು ಮಾಡಬಾರದುಎಂದು ಮುದಸಿರ್ ಚಿಕ್ಕಪ್ಪ ಮಹಮದ್ ಯೂನಸ್ ಮನವಿ ಮಾಡಿದ್ದಾರೆ.