ಟ್ರಾವೆಲ್ ಮಾಡೋದು ಮಾಮೂಲಾಗಿ ಎಲ್ಲರಿಗೂ ಇಷ್ಟ. ಆದರೆ ಕೆಲವೊಮ್ಮೆ ಕೆಲವರಿಗೆ ಈ Motion Sickness ನಿಂದಾಗಿ ಟ್ರಾವೆಲ್ ಮಾಡೋ ಮಜಾನೇ ಹಾಳಾಗುತ್ತೆ ಅಲ್ವಾ?. ನಮ್ಮ ಕಣ್ಣು, ಕಿವಿ, ಮೆದುಳು ಒಂದೇ ಸಮಯದಲ್ಲಿ ವಿಭಿನ್ನ ರೀತಿಯ ಮಾಹಿತಿ ನೀಡಿದ್ರೆ ಮೆದುಳಿಗೆ ಗೊಂದಲ ಉಂಟಾಗಿ ಇಂತಹ ಲಕ್ಷಣಗಳು ಬರುತ್ತವೆ. ಇಷ್ಟೆಲ್ಲಾ ಕಷ್ಟ ಅನುಭವಿಸದೇ ಸುಖವಾಗಿ ಪ್ರಯಾಣ ಮಾಡ್ಬೇಕಾ?
ಈ ಸಮಸ್ಯೆಗೆ ಏನಾದ್ರೂ ಸರಳ ಮನೆಮದ್ದುಗಳಿದ್ದರೆ ಹೇಗಿರುತ್ತೆ ಅನ್ನೋದು ನೋಡಿ. ಪ್ರಯಾಣದ ಮೊದಲು ಈ ಕ್ರಮಗಳನ್ನು ಅನುಸರಿಸಿ, ನೀವೂ ಸುಲಭವಾಗಿ ಈ Motion Sickness ತಡೆಯಬಹುದು.
ಸರಿಯಾದ ಸ್ಥಳದಲ್ಲಿ ಕುಳಿತುಕೊಳ್ಳಿ: ಬಸ್ಸಿನಲ್ಲಿ ಮಧ್ಯಭಾಗ ಅಥವಾ ಕಾರಿನಲ್ಲಿ ಮುಂದಿನ ಸೀಟು ಚಲನೆಯ ತೀವ್ರತೆ ಕಡಿಮೆ ಮಾಡುವ ಸ್ಥಳಗಳು. ಸಾಧ್ಯವಾದಷ್ಟು ಈ ಸ್ಥಳಗಳಲ್ಲಿ ಕುಳಿತುಕೊಳ್ಳೂ ಟ್ರೈ ಮಾಡಿ. ಕಿಟಕಿಯ ಪಕ್ಕದ ಆಸನ ಆಯ್ಕೆ ಮಾಡಿ.
ಖಾಲಿ ಹೊಟ್ಟೆ ತಪ್ಪಿಸಿ: ಪ್ರಯಾಣಕ್ಕೆ ಮೊದಲು ಲಘು ಆಹಾರ ಸೇವಿಸಿ. ಭಾರೀ ಊಟ ಅಥವಾ ಖಾಲಿ ಹೊಟ್ಟೆ ಎರಡೂ ತೊಂದರೆ ತಂದಿಡುತ್ತವೆ.
ಶುಂಠಿ ಸೇವನೆ: ಶುಂಠಿಯು ನೈಸರ್ಗಿಕ ಉದ್ದೀಪಕ. ಪ್ರಯಾಣಕ್ಕೂ ಮುನ್ನ ಶುಂಠಿ ಚಹಾ ಕುಡಿಯುವುದು ಅಥವಾ ತುಂಡು ಅಗಿಯುವುದು ಫಲಕಾರಿಯಾಗಿದೆ.
ಶಾಂತ ಮನಸ್ಥಿತಿ ಮತ್ತು ಉಸಿರಾಟ: ಆಳ ಉಸಿರಾಟ ಮತ್ತು ನೆಚ್ಚಿನ ಸಂಗೀತದಿಂದ ಮನಸ್ಸನ್ನು ಬೇರೆಡೆಗೆ ಕೇಂದ್ರೀಕರಿಸಿ, ವಾಂತಿಯ ತೀವ್ರತೆಯನ್ನು ಕಡಿಮೆಮಾಡಬಹುದು.
ಈ ಸರಳ ಪರಿಹಾರಗಳಿಂದ ನಿಮ್ಮ ಮುಂದಿನ ಪ್ರಯಾಣ ಸುಗಮ ಮತ್ತು ಆರಾಮದಾಯಕವಾಗಿರುತ್ತದೆ.