ಸಾಮಾಗ್ರಿಗಳು
ಮೂಲಂಗಿ
ಕ್ಯಾರೆಟ್
ಹಸಿಮೆಣಸು
ಕೊತ್ತಂಬರಿ ಕಾಳು
ಜೀರಿಗೆ
ಸಾಸಿವೆ
ಕಾಳುಮೆಣಸು
ಸೋಂಪು
ಮೆಂತ್ಯೆ ಕಾಳು
ಅರಿಶಿಣ
ಉಪ್ಪು
ಖಾರದಪುಡಿ
ಕಪ್ಪು ಎಳ್ಳು
ಎಣ್ಣೆ
ಹಿಂಗ್
ನಿಂಬೆಹುಳಿ
ಮಾಡುವ ವಿಧಾನ
ಮೊದಲು ಕ್ಯಾರೆಟ್ ಹಾಗೂ ಮೂಲಂಗಿಯನ್ನು ನೂಡಲ್ಸ್ ರೀತಿ ಪೀಲ್ ಮಾಡಿ ಇಟ್ಟುಕೊಳ್ಳಿ
ಇದನ್ನು ಉದ್ದುದ್ದ ಕಟ್ ಮಾಡಿದ ಮೆಣಸಿನ ಕಾಯಿ ಹಾಕಿ, ತೆಳು ಬಟ್ಟೆಯಲ್ಲಿ ಹರಡಿ ಬಿಸಿಲಿಗೆ ಇಡಿ
ನಂತರ ಪ್ಯಾನ್‌ಗೆ ಕೊತ್ತಂಬರಿ ಕಾಳು ಜೀರಿಗೆ ಸಾಸಿವೆ ಕಾಳುಮೆಣಸು ಸೋಂಪು ಮೆಂತ್ಯೆ ಕಾಳು ಡ್ರೈ ರೋಸ್ಟ್ ಮಾಡಿ, ರೋಸ್ಟ್ ಆಗಿ ತಣ್ಣಗಾದ ನಂತರ ಪುಡಿ ಮಾಡಿ ಇಟ್ಟುಕೊಳ್ಳಿ
ನಂತರ ಈ ಪುಡಿಯನ್ನು ಮೂಲಂಗಿ ಕ್ಯಾರೆಟ್‌ಗೆ ಹಾಕಿ ಮಿಕ್ಸ್ ಮಾಡಿ, ಮೇಲೆ ಉಪ್ಪು, ಅರಿಶಿಣ, ಖಾರದಪುಡಿ, ಕಪ್ಪು ಎಳ್ಳು ಹಾಕಿ ಮಿಕ್ಸ್ ಮಾಡಿ
ನಂತರ ಎಣ್ಣೆ ಕಾಯಿಸಿ, ಅದಕ್ಕೆ ಹಿಂಗ್ ಹಾಕಿ ಉಪ್ಪಿನಕಾಯಿಗೆ ಹಾಕಿ, ಮೇಲೆ ನಿಂಬೆರಸ ಸುರಿದ್ರೆ ಉಪ್ಪಿನಕಾಯಿ ರೆಡಿ



