ನೀರು, ಭೂಮಿ, ಹಿಮದ ಮೇಲೆ ಚಲಿಸುತ್ತೆ: ದೇಶದ ಮೊದಲ ಹೋವರ್‌ಕ್ರಾಫ್ಟ್ ಬೋಟ್​ನ ಪ್ರಾಯೋಗಿಕ ಪರೀಕ್ಷೆ ಯಶಸ್ವಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೀರು, ಭೂಮಿ, ಹಿಮದ ಮೇಲೆ ಚಲಿಸುವ ದೇಶದ ಮೊದಲ ಹೋವರ್‌ಕ್ರಾಫ್ಟ್ ಬೋಟ್​ನ ಪ್ರಾಯೋಗಿಕ ತಮಿಳುನಾಡಿನ ಕೆರೆಯೊಂದರಲ್ಲಿ
ಪರೀಕ್ಷೆ ಯಶಸ್ವಿಯಾಗಿದೆ.

ಯುರೋಟೆಕ್ ಪಿವೋಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ರೂಪಿಸಿರುವ ಈ ಬೋಟ್​ ಗಂಟೆಗೆ 20 ರಿಂದ 25 ಕಿಮೀ ವೇಗದಲ್ಲಿ ಸಂಚಾರ ನಡೆಸಿದೆ.

ನೀರು ಮತ್ತು ಭೂಮಿಯ ಮೇಲೆ ಕಾರ್ಯಾಚರಣೆ ನಡೆಸಲು ಉದ್ದೇಶಿಸಿ 50 ಲಕ್ಷ ರೂಪಾಯಿ ವೆಚ್ದದಲ್ಲಿ ಈ ಹೋವರ್​ಕ್ರಾಫ್ಟ್​ ಬೋಟ್​ ಅನ್ನು ನಿರ್ಮಿಸಲಾಗಿದೆ.

ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡದ ನೇತೃತ್ವದಲ್ಲಿ ಸೂಲೂರು ಎಂಬಲ್ಲಿನ ಚಿಕ್ಕ ಕೆರೆಯಲ್ಲಿ ಪ್ರಾಯೋಗಿಕ ಓಡಾಟ ನಡೆಸಲಾಯಿತು. ಹೋವರ್‌ಕ್ರಾಫ್ಟ್ ನೀರಿನ ಮೇಲೆ ನುಗ್ಗುತ್ತಿರುವುದನ್ನು ಜನರು ಆಸಕ್ತಿಯಿಂದ ವೀಕ್ಷಿಸಿದರು.

ಯೂರೋಟೆಕ್ ಸಲ್ಯೂಷನ್ಸ್​ನ ವ್ಯವಸ್ಥಾಪಕ ನಿರ್ದೇಶಕಿ ಸುಪ್ರಿತಾ ಚಂದ್ರಶೇಖರ್ ಮಾತನಾಡಿ, ದೇಶದಲ್ಲಿಯೇ ಪ್ರಥಮ ಬಾರಿಗೆ ನೀರು ಮತ್ತು ಭೂಮಿಯಲ್ಲಿ ಕಾರ್ಯಾಚರಣೆ ನಡೆಸುವ ಹೋವರ್​ಕ್ರಾಫ್ಟ್ ಬೋಟ್ ತಯಾರಿಸಿರುವುದು ಸಂತಸ ತಂದಿದೆ. ಸದ್ಯ ಪ್ರಾಯೋಗಿಕವಾಗಿ ನಡೆದ ಪರೀಕ್ಷೆ ಯಶಸ್ವಿಯಾಗಿದೆ. ಗಂಟೆಗೆ 20 ರಿಂದ 25 ಕಿಮೀ ವೇಗದಲ್ಲಿ ಬೋಟ್​ ಚಲಿಸಿದೆ. ಇದಕ್ಕೆ ನೀರು, ಭೂಮಿ ಮತ್ತು ಹಿಮಭರಿತ ಪ್ರದೇಶಗಳಲ್ಲಿ ಗಂಟೆಗೆ 80 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಗಂಟೆಗೆ 100 ಕಿಮೀ ವೇಗದಲ್ಲಿ ಪ್ರಯಾಣಿಸುವ ಕ್ರಾಫ್ಟ್ ಬೋಟ್ ಅನ್ನು ಮುಂದೆ ವಿನ್ಯಾಸಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಕೆನಡಾದ ಖಾಸಗಿ ಕಂಪನಿಯ ಸಹಯೋಗದಲ್ಲಿ ಸಿದ್ಧಪಡಿಸಲಾದ ಈ ರೋವರ್ ಕ್ರಾಫ್ಟ್ ಅನ್ನು ಚಂಡಮಾರುತ, ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪಕ್ಕೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಬಳಸಬಹುದಾಗಿದೆ. ಜೊತೆಗ ಕರಾವಳಿ ಗಡಿ ರಕ್ಷಣೆ, ನೌಕಾಪಡೆಯ ಕಣ್ಗಾವಲು ಮತ್ತು ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಅಗತ್ಯಗಳಿಗಾಗಿಯೂ ಬಳಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!