ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಶಾಸಕ ಮೊಯ್ದಿನ್ ಬಾವಾ ಅವರ ಸೋದರ ನಾಪತ್ತೆಯಾಗಿರುವ ಉದ್ಯಮಿ ಮುಮ್ತಾಜ್ ಆಲಿಯವರ ಹುಡುಕಾಟ ಮುಂದುವರಿದಿದ್ದು, ಮುಳುಗುತಜ್ಞ ಈಶ್ವರ ಮಲ್ಪೆ ತಂಡ ಸಹಿತ ಹಲವು ರಕ್ಷಣಾ ತಂಡಗಳು ಶೋಧ ಕಾರ್ಯದಲ್ಲಿ ತೊಡಗಿದೆ.
ಕೂಳೂರು ಸೇತುವೆಯಲ್ಲಿ ಕಾರು ಅಪಘಾತದ ರೀತಿಯಲ್ಲಿ ಪತ್ತೆಯಾದ ನಂತರ, ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಯಿತು.
ಹುಡುಕಾಟದ ಹಂತವನ್ನು ನಡೆಸಿದ ನಂತರ, ಈಶ್ವರ ಮಲ್ಪೆ ತಂಡ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಏಳು ಮಂದಿ ಕಾರ್ಯಾಚರಣೆ ನಡೆಸಿದ್ದೇವೆ. ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಕೆಳಗೆ ಕಬ್ಬಿಣದ ಸರಳುಗಳು ಹಾಗೂ ಸಿಮೆಂಟ್ ಚೀಲಗಳಿದ್ದು, ಕೆಳಗೆ ಕತ್ತಲು ಆವರಿಸಿದ್ದರಿಂದ ಕಾಮಗಾರಿ ಕಷ್ಟಕರವಾಗಿದೆ.
ಇಲ್ಲಿ ಬಿದ್ದಿದ್ದರೆ ಇಲ್ಲೇ ಸಿಗಬೇಕು, ಸಮುದ್ರ ಸೇರಲು ಸಾಧ್ಯವಿಲ್ಲ. ಎಲ್ಲಾ ತಂಡಗಳು ತಮ್ಮ ಕಾರ್ಯಾಚರಣೆಯನ್ನು ಪುನರಾರಂಭಿಸಿವೆ. ಅವರು ಜೀವಂತವಾಗಿದ್ದಾರೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದ್ದಾರೆ.
ಸ್ಥಳದಲ್ಲಿ ಮೊಯ್ದಿನ್ ಬಾವಾ ಇದ್ದಾರೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಅಲಿ ಅವರ ಸಹೋದರ ಬಿ.ಎಂ. ಫಾರೂಕ್, ಐವನ್ ಡಿಸೋಜಾ ಭೇಟಿ ನೀಡಿದ್ದಾರೆ.