ಬಿಜೆಪಿಯ ಸಕ್ರೀಯ ಸದಸ್ಯರಾಗಿ ಸದಸ್ಯತ್ವ ನವೀಕರಿಸಿದ ಸಂಸದ ಗದ್ದಿಗೌಡ

ಹೊಸ ದಿಗಂತ ವರದಿ, ಬಾಗಲಕೋಟೆ:

ಭಾರತೀಯ ಜನತಾ ಪಕ್ಷದ ಸಕ್ರೀಯ ಸದಸ್ಯರಾಗಿ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ಸದಸ್ಯತ್ವವನ್ನು ನವೀಕರಿಸಿಕೊಂಡರು.
ತಮ್ಮ ಕಛೇರಿಯಲ್ಲಿ ಭಾನುವಾರ ಸಕ್ರೀಯ ಸದಸ್ಯತ್ವ ಪ್ರಮಾಣ ಪತ್ರವನ್ನು ಸ್ವೀಕರಿಸಿ ಅವರು ಮಾತನಾಡಿದರು. ಭಾರತೀಯ ಜನತಾ ಪಕ್ಷ ದೇಶದಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿದ ಪಕ್ಷವಾಗಿ ಹೊರಹೊಮ್ಮಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಮಿಸ್ ಕಾಲ್ ಕೊಡುವ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ದೇಶಾಧ್ಯಂತ ಸದಸ್ಯತ್ವ ಅಭಿಯಾನ ಜೋರಾಗಿ ನಡೆಯುತ್ತಿದೆ. ರಾಜ್ಯದಲ್ಲಿ ಕೂಡ ಬಿಜೆಪಿ ಸದಸ್ಯರಾಗಲು ಉತ್ಸುಕತೆಯಿಂದ ಜನ ಸ್ವಯಂಪ್ರೇರಣೆಯಿಂದ ಬರುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಬಾಗಲಕೋಟೆ ಜಿಲ್ಲೆಯೂ ಮೂರನೇ ಸ್ಥಾಣದಲ್ಲಿ ಇದ್ದು ಈಗ ಮತ್ತೊಮ್ಮೆ ದಿನಾಂಕವನ್ನು ಮುಂದುವರೆಸಿದ ಕಾರಣ ಸಕ್ರೀಯ ಸದಸ್ಯತ್ವ ಪಡೆದುಕೊಳ್ಳುವವರು ಹಾಗೂ ಸದಸ್ಯತ್ವ ಪಡೆದುಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಾಗಲಕೋಟೆ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ,ನಾಯಕರು,ಪದಾಧಿಕಾರಿಗಳು,ಜಿಲ್ಲಾಧ್ಯಕ್ಷರು, ಬೂತಮಟ್ಟದ ಕಾರ್ಯಕರ್ತರು,ಮುಖಂಡರು ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿರುವ ಪರಿಣಾಮ ಸದಸ್ಯತ್ವ ಹೆಚ್ಚಾಗಲು ಸಹಾಯಕವಾಗುತ್ತಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!