ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ಟಪೋರಿ ಎಂದು ಬಿಜೆಪಿ ಸಂಸದೆ ಕಂಗನಾ ರನೌತ್ ಕರೆದಿದ್ದಾರೆ.
ಸಂಸತ್ ನ ಆವರಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕಂಗನಾ, ರಾಹುಲ್ ಗಾಂಧಿ ಅವರು ಇತರೆ ಸಂಸದರ ಜೊತೆ ನಡೆದುಕೊಳ್ಳುವ ರೀತಿ ನೋಡಿದರೆ ‘ಟಪೋರಿ’ ಅಂತೆ ಕಾಣುತ್ತದೆ ಎಂದು ಟೀಕಿಸಿದರು.
ಸಂಸತ್ ನಲ್ಲಿ ರಾಹುಲ್ ಗಾಂಧಿ ನಡೆದುಕೊಳ್ಳುವ ರೀತಿ ಕಂಡಾಗ ಮಹಿಳಾ ಸಂಸದರಿಗೆ ಒಂದು ರೀತಿಯ ಮುಜುಗರ ಉಂಟಾಗುತ್ತದೆ. ಯಾರಾದರೂ ಮಾದ್ಯಮಕ್ಕೆಸಂದರ್ಶನ ನೀಡುತ್ತಾ ಇರುವಾಗ ಮದ್ಯ ಪ್ರವೇಶಿಸುತ್ತಾರೆ. ಅವರ ಈ ರೀತಿಯ ವರ್ತನೆ ಟಪೋರಿಯಂತೆ ಕಾಣುತ್ತದೆ. ಆದರೆ ಅವರ ಸಹೋದರಿಯ ನಡವಳಿಕೆ ಶಿಸ್ತಿನಿಂದ ಕೂಡಿದ್ದು, ಅದನ್ನು ನೋಡಿ ಕಲಿಯಬೇಕು ಎಂದು ಹೇಳಿದರು.
ಇದೇ ವೇಳೆ ಸಂಸತ್ತಿನ ಮಕರ ದ್ವಾರ ಪ್ರವೇಶದ್ವಾರದಲ್ಲಿ ರಾಹುಲ್ ಗಾಂಧಿ ಚಹಾ ಮತ್ತು ಬಿಸ್ಕತ್ತು ಸೇವಿಸಿದ ಘಟನೆಗೆ ದೇಶದ ಮುಂದೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.



