ಸಂಸದ ತೇಜಸ್ವಿ ಸೂರ್ಯ ಪರ್ಸನಲ್ ಫೋನ್ ನಂಬರ್ ಲೀಕ್, ಮಿಸ್‌ಯೂಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಸದ ತೇಜಸ್ವಿ ಸೂರ್ಯ ಅವರ ಪರ್ಸನಲ್ ಫೋನ್ ನಂಬರ್ ಲೀಕ್ ಆಗಿದ್ದು, ಅಪರಿಚಿತ ವ್ಯಕ್ತಿಯೊಬ್ಬ ನಂಬರ್ ದುರ್ಬಳಕೆ ಮಾಡಿಕೊಂಡಿದ್ದಾನೆ.

ಈತನ ವಿರುದ್ಧ ತೇಜಸ್ವಿ ಸೂರ್ಯ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಯೊಬ್ಬ ತೇಜಸ್ವಿ ಸೂರ್ಯ ಹೆಸರಿನಲ್ಲಿ ಗುಜರಾತ್‌ನ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪ್ರಶಾಂತ್ ಕೋರಟ್ ಅವರಿಗೆ ಕರೆ ಮಾಡಿ ಹಣ ಹಾಗೂ ವಜ್ರಗಳನ್ನು ನೀಡುವಂತೆ ಬೇಡಿಕೆಯಿಟ್ಟಿದ್ದಾರೆ.

ನಂತರ ಪ್ರಶಾಂತ್ ಅವರು ತೇಜಸ್ವಿ ಸೂರ್ಯ ಅವರಿಗೆ ಕರೆ ಮಾಡಿ, ಸ್ಪಷ್ಟನೆ ಪಡೆದಿದ್ದಾರೆ. ಆಗ ಇದು ಫೇಕ್ ಕಾಲ್ ಎಂದು ತಿಳಿದಿದೆ. ನಂತರ ತೇಜಸ್ವಿ ಸೂರ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಾಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!