ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೃಣಾಲ್ ಠಾಕೂರ್ ತಮ್ಮ ವೈಯಕ್ತಿಕ ಜೀವನದ ವಿಷಯಗಳನ್ನೂ ನಿರ್ಭಯವಾಗಿ ಹಂಚಿಕೊಳ್ಳುವ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಹೊಸ ಚಿತ್ರ ‘ದೋ ದೀವಾನೆ ಶೆಹರ್ ಮೇ’ ಪ್ರಚಾರದ ಸಂದರ್ಭದಲ್ಲಿ ಅವರು ಮಾಜಿ ಪ್ರೇಮಿಯ ಕುರಿತು ಮಾತನಾಡಿ ಗಮನ ಸೆಳೆದಿದ್ದಾರೆ.
2019ರಲ್ಲಿ ಬಿಡುಗಡೆಯಾದ ಸೂಪರ್ 30 ಚಿತ್ರದಲ್ಲಿ ಹೃತಿಕ್ ರೋಷನ್ ಜೊತೆ ಅಭಿನಯಿಸಿದ ಸಂದರ್ಭವನ್ನು ಅವರು ನೆನಪಿಸಿಕೊಂಡಿದ್ದು. ಆ ಸಮಯದಲ್ಲಿ ತಮ್ಮ ವಿದೇಶಿ ಮಾಜಿ ಬಾಯ್ಫ್ರೆಂಡ್ ನಡೆದುಕೊಳ್ಳುತ್ತಿದ್ದ ರೀತಿ ಅವರಿಗೆ ಶಾಕಿಂಗ್ ಎಂದೆನಿಸುತ್ತಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ:
ಹೃತಿಕ್ ಜೊತೆ ಚಿತ್ರೀಕರಣದಲ್ಲಿ ತೊಡಗಿರುವುದರಿಂದ ಆತ ಜಿಮ್‌ಗೆ ಹೋಗಿ ತೂಕ ಇಳಿಸಿ ದೇಹದಾರ್ಢ್ಯ ಹೆಚ್ಚಿಸಿಕೊಳ್ಳಲು ಆರಂಭಿಸಿದ್ದ. ಕೆಲ ತಿಂಗಳುಗಳ ಬಳಿಕ ವ್ಯಾಯಾಮ ಬಿಟ್ಟು ಮನೆಯಲ್ಲೇ ಇರುವುದರಿಂದ ಮತ್ತೆ ಸುಮಾರು ಇಪ್ಪತ್ತು ಕಿಲೋ ತೂಕ ಹೆಚ್ಚಿಸಿಕೊಂಡಿದ್ದಾನೆ ಎಂದು ವಿವರಿಸಿದರು. ತಾನು ಯಾವತ್ತೂ ತೂಕ ಇಳಿಸಿಕೊಳ್ಳಲು ಒತ್ತಾಯ ಮಾಡಿಲ್ಲ, ಅವನ ಮನಸ್ಸಿನ ಅಶಾಂತಿಯೇ ಕಾರಣ ಎಂದು ಸ್ಪಷ್ಟಪಡಿಸಿದರು.
ಮದುವೆ ಕುರಿತ ವದಂತಿಗಳನ್ನೂ ಅವರು ಹಾಸ್ಯವಾಗಿ ತಳ್ಳಿ ಹಾಕಿದರು. “ನನ್ನ ಮದುವೆ ಫೆಬ್ರವರಿ 14ರಂದು ಅಲ್ಲ, ಏಪ್ರಿಲ್ 1ರಂದು” ಎಂದು ಹೇಳಿ ಹರಿದಾಡುತ್ತಿರುವ ಗಾಸಿಪ್‌ಗಳಿಗೆ ತೆರೆ ಎಳೆದರು.



