ಮುಡಾ ಕೇಸ್: ಸಿಎಂ ಸಿದ್ಧರಾಮಯ್ಯ ವಿರುದ್ಧ CBI ತನಿಖೆ ಕೋರಿದ್ದ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೈಸೂರಿನ ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ಆರೋಪ ಪ್ರಕರಣ ಸಂಬಂಧ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ಆದೇಶವನ್ನು ಕಾಯ್ದಿರಿಸಿದೆ.

ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶ ನ್ಯಾ.ಎಂ ನಾಗಪ್ರಸನ್ನ ಅವರು, ಆದೇಶವನ್ನು ಕಾಯ್ದಿರಿಸಿ ಆದೇಶ ಹೊರಡಿಸಿದ್ದಾರೆ.

ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಮಣೀಂದರ್‌ ಸಿಂಗ್‌ ಪರವಾಗಿ ವಾದ ಮಂಡಿಸಿ, ಜನಸಾಮಾನ್ಯರ ಮನಸ್ಸಿನಲ್ಲಿ ಸ್ವತಂತ್ರ ತನಿಖೆ ನಡೆದಿದೆ ಎಂಬುವುದು ಲೋಕಾಯುಕ್ತ ತನಿಖೆಯಿಂದ ಸಾಧ್ಯವಿಲ್ಲ. ಹೀಗಾಗಿ, ಕೇಂದ್ರೀಯ ಸಂಸ್ಥೆಗಳ ತನಿಖೆ ನೀಡಬೇಕು ಎಂದು ರಾಜ್ಯ ಸರ್ಕಾರದ ಅಧೀನದಲ್ಲಿರುವ ಲೋಕಾಯುಕ್ತ ಮೇಲೆ ಜನರಿಗೆ ಅನುಮಾನ ಬರುವಂತಿದೆ ಎಂದರು.

ವಿಚಾರಣೆಯ ಆರಂಭದಲ್ಲಿ ರಾಜ್ಯ ಸರ್ಕಾರದ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು. ಲೋಕಾಯುಕ್ತ ತನಿಖೆ ತಾರತಮ್ಯಪೂರಿತವಾಗಿದ್ದಾಗ ಬೇರೆ ಸಂಸ್ಥೆಯಿಂದ ತನಿಖೆ ಕೋರಬಹುದು. ಈ ಕೇಸ್ ನಲ್ಲಿ ಇದ್ಯಾವುದು ಆಗದಿದ್ದರೂ ಸಿಬಿಐ ತನಿಖೆ ಕೋರುತ್ತಿದ್ದಾರೆ. ಲೋಕಾಯುಕ್ತ ಪೊಲೀಸರ ವರದಿಯಲ್ಲಿ ಏನಿದೆ ಎಂಬುದನ್ನು ಯಾರು ನೋಡಿಲ್ಲ ಎಂದು ಅವರು ವಾದ ಮಂಡಿಸಿದರು.

ಬಳಿಕ ಸಿಎಂ ಪರ ವಕೀಲ ಅಭಿಷೇಕ್ ಮನು ಸಿಂಗ್ವಿ ವಾದ ಮಂಡಿಸಿದ್ದು, ಸಿಬಿಐ ತನಿಖೆಗೆ ಅರ್ಹವಾಗಲು ಇದು ಅಪರೂಪದ ಪ್ರಕರಣವಲ್ಲ. ಲೋಕಾಯುಕ್ತ ತನಿಖೆಯಲ್ಲಿ ಮಧ್ಯಪ್ರವೇಶಿಸಿ ಸಿಬಿಐಗೆ ಹಸ್ತಾಂತರ ಸರಿಯಲ್ಲ. ದೂರುದಾರರಿಗೆ ರಾಜ್ಯಪಾಲರ ಅನುಮತಿ ಬೇಕಿತ್ತು ಪಡೆದರು. ಮೊದಲಿಗೆ ಲೋಕಾಯುಕ್ತ ಪೊಲೀಸರ ತನಿಖೆ ಕೋರಿದರು. ತನಿಖೆ ಆಗುವ ಮೊದಲೇ ಸಿಬಿಐ ತನಿಖೆ ಕೇಳುತ್ತಿದ್ದಾರೆ. ಲೋಕಾಯುಕ್ತ ಪೊಲೀಸರ ತನಿಖೆಯ ಲೋಪವೇನು ಎಂದು ಹೇಳಿಲ್ಲ. ಆರೋಪಿ ಸ್ಥಾನದಲ್ಲಿ ಸಿಎಂ ಇದ್ದಾರೆ ಸಿಬಿಐಗೆ ಕೊಡಿ ಎನ್ನುತ್ತಿದ್ದಾರೆ. ಇದು ತಪ್ಪು ಮೇಲ್ ಪಂಕ್ತಿಗೆ ಕಾರಣವಾಗುತ್ತದೆ ಎಂದು ವಾದ ಮಂಡಿಸಿದರು.

ಸಿಎಂ ಆಗಿರುವುದರಿಂದ ತನಿಖೆ ಮೇಲೆ ಪ್ರಭಾವ ಬೀರಿದ್ದಾರೆ ಎನ್ನುತ್ತಿದ್ದಾರೆ. ಯಾವುದೇ ಆಧಾರವಿಲ್ಲದೆ ಈ ಆರೋಪ ಒಪ್ಪಲು ಸಾಧ್ಯವಿಲ್ಲ. ಹೀಗಾದರೆ ಎಲ್ಲಾ ಸಿಎಂ ಗಳ ಸಚಿವರ ಕೇಸ್ಗಳು ಸಿಬಿಐಗೆ ಹೋಗಬೇಕೇ? FIR ದಾಖಲಾಗುವ ಮೊದಲೇ ಇವರು ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಸಿಎಂ ಎಂಬ ಒಂದೇ ಕಾರಣಕ್ಕೆ ಲೋಕಾಯುಕ್ತ ಪೊಲೀಸರ ತನಿಖೆ ಪ್ರಶ್ನಿಸಿದ್ದಾರೆ. ಹೀಗಾಗಿ ತನಿಖಾ ವರದಿಯ ಅರ್ಹತೆಯನ್ನು ಇಲ್ಲಿ ಪ್ರಶ್ನಿಸಿಲ್ಲ. ಹೈಕೋರ್ಟ್ ನಲ್ಲಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಪ್ರಶ್ನಿಸಿದರು. ಸಿಬಿಐಗೆ ಹಸ್ತಾಂತರಿಸಲು ಈ ಕೇಸ್ ಅಪರೂಪದಲ್ಲಿ ಅಪರೂಪವಲ್ಲ. ಲೋಕಾಯುಕ್ತ ಪೊಲೀಸರ ತನಿಖೆಯ ಮಧ್ಯದಲ್ಲಿ ಹಸ್ತಾಂತರ ಸರಿಯಲ್ಲ. ಸಿಎಂ ಸಚಿವರ ವಿರುದ್ಧದ ಕೇಸ್ ಸಿಬಿಐಗೆ ಹೋಗಬೇಕೇ? ಹೀಗೆಂದಾದರೆ ಸಿಬಿಐಗೆ ಕೇಸ್ ಗಳ ಮಹಾಪೂರವೇ ಹರಿದು ಹೋಗುತ್ತದೆ ಎಂದು ವಾದಿಸಿದರು.

ಲೋಕಾಯುಕ್ತ ಸಂಸ್ಥೆಯ ಕಡೆಗೆ ಎಲ್ಲರೂ ಬರುತ್ತಾರೆ ಸಿಎಂ ಡಿಸಿಎಂ ಉನ್ನತ ಅಧಿಕಾರಿಗಳು ಕೂಡ ಬರುತ್ತಾರೆ. ರಾಜಕೀಯ ಬಣ್ಣವಿದೆ ಎಂಬ ಕಾರಣಕ್ಕೆ ಸಿಬಿಐಗೆ ನೀಡಬಾರದು ದೂದಾರ ಮೊದಲಿಗೆ ಸಿಪಿಐ ತನಿಖೆ ಕೋರಿರಲಿಲ್ಲ. ಈಗ ಸಿಬಿಐ ತನಿಖೆ ಕೋರುತ್ತಿದ್ದಾರೆ ಇದನ್ನು ಪರಿಗಣಿಸಬೇಕು ವಾದ ಅಂತ್ಯಗೊಳಿಸಿದರು.

ಇದಾದ ಬಳಿಕ ಸಿಎಂ ಪರ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ವಾದ ಮಂಡಿಸಿದ್ದು, ಮುಡಾ ಲೇಔಟ್ ಪ್ಲಾನ್ ಕೋರ್ಟಿಗೆ ನೀಡಿದ ವಕೀಲರು ಸರ್ವೆ ನಂಬರ್ 464 ದೇವನೂರು ಲೇಔಟ್ ನ ಭಾಗವಾಗಿರಲಿಲ್ಲ. ಭೂ ಮಾಲೀಕರು ಪರಿಹಾರದ ಹಣವು ಪಡೆದಿರಲಿಲ್ಲ. ಕೋರ್ಟ್ ನಿಂದ ಪರಿಹಾರದ ಹಣವನ್ನು ವಾಪಸ್ ಪಡೆಯಲಾಗಿತ್ತು. ಹೀಗಾಗಿ ಈ ಜಮೀನು ಡಿನೋಟಿಫಿಕೇಶನ್ ಆಗಿತ್ತು. ಸಿಬಿಐ ಪ್ರಧಾನ ಮಂತ್ರಿ ಕಛೇರಿ ವ್ಯಾಪ್ತಿಗೆ ಒಳಪಡುತ್ತದೆ. ಹಾಗಾಗಿ ಸಿಬಿಐ ಈ ಕೇಸ್ ಅನ್ನು ಹಸ್ತಾಂತರಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!