ಮುಡಾ ಪ್ರಕರಣ | ಕಾನೂನು, ರಾಜಕೀಯ ಹೋರಾಟಕ್ಕೆ ಸಿದ್ಧ: ಸಿಎಂ ಸಿದ್ದರಾಮಯ್ಯ

ದಿಗಂತ ವರದಿ ಬೆಳಗಾವಿ:

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕವಾಗಿ ಮತ್ತು ರಾಜಕೀಯವಾಗಿ ಹೋರಾಟ ಮಾಡಲು ಸಿದ್ಧವಾಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ರಾಜ್ಯಪಾಲರು ತಮ್ಮ ವಿರುದ್ದ ತನಿಖೆಗೆ ಪ್ರಾಶ್ಯೂಕೇಶನ್ ಗೆ ಅನುಮತಿ ಕೊಟ್ಟರೆ ತಮ್ಮ ಮುಂದಿನ ಆದೇಶದವರೆಗೆ ನಡೆ ಏನೆಂದು ಕೇಳುತ್ತಿದ್ದಂತೆ ಸಿಡಿಮಿಡಿಗೊಂಡರು.

ರಾಜ್ಯಪಾಲರು ಇವತ್ತು ದೆಹಲಿಯಿಂದ ಬರುತ್ತಾರೆ ಅಂತಾ ನಿಮಗೆ ಹೇಳಿದ್ದಾರಾ ಎಂದು ಆಕ್ರೋಶಭರಿತರಾಗಿ ಸುದ್ದಿಗಾರರಿಗೆಯೇ ಮರು ಪ್ರಶ್ನೆ ಹಾಕಿದರು. ಅಬ್ರಾಹಂ ಕೊಟ್ಟಿರುವ ಖಾಸಗಿ ದೂರನ್ನು ತಿರಸ್ಕಾರ ಮಾಡುವಂತೆ ನಾವು ಮನವಿ ಮಾಡಿದ್ದೇವೆ. ಹೀಗಾಗಿ, ಈ ವಿಷಯದಲ್ಲಿ ಕಾನೂನು ಹಾಗೂ ರಾಜಕೀಯ ಹೋರಾಟಕ್ಕೆ ನಾನು ಸಿದ್ಧನಾಗಿದ್ದೇನೆ ಎಂದರು.

ಗೃಹ ಲಕ್ಷ್ಮಿ ಹಣ ಕೇವಲ ಜುಲೈ ತಿಂಗಳದ್ದು ಬಂದಿಲ್ಲ ಕೂಡಲೇ ಹಾಕಲಾಗುವುದು ಎಂದ ಅವರು, ನೆರೆ ಸಂತ್ರಸ್ತರಿಗೆ ಪರಿಹಾರ ಕೊಡುವ ಕೆಲಸವನ್ನು ಸರಕಾರ ಮಾಡುತ್ತಿದೆ. ಜನಜಾನುವಾರುಗಳು ಮನಷ್ಯರ ಪ್ರಾಣಿಹಾನಿಗೆ ಪರಿಹಾರ ಕೊಡುತ್ತಿದೇವೆ ಎಂದರು.

ಯಡಿಯೂರಪ್ಪ ಅವರು ಸಿಎಂ ಇದ್ದಾಗ 5 ಲಕ್ಷ ಪರಿಹಾರ ಕೊಟ್ಡರು. ಆ ಸಮಯದಲ್ಲಿ ಎಲ್ಲರಿಗೂ ಸಿಕ್ಕಿಲ್ಲ. ಸದ್ಯ 1,20,000 ಸಾವಿರ ಹಣವನ್ನು ಕೊಡುತ್ತೇವೆ. ಜೊತೆಗೆ ಒಂದು ಮನೆಯನ್ನು ಕೊಡುತ್ತಿವೆ ಎಂದರು.
ಮುಂದಿನವಾರ ಹೆಚ್ಚಿನ ಮಳೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ಕೊಟ್ಟಿದೆ. ಸರಕಾರ ಮಳೆಯನ್ನು ಎದುರಿಸಲು ಸಜ್ಜಾಗಿದೆ. ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಪ್ರವಾಹದ ಗ್ರಾಮಗಳಿಗೆ ಶಾಶ್ವತ ಪರಿಹಾರದ ವಿಚಾರದ ಬಗ್ಗೆ ತಿರ್ಮಾನ ಮಾಡಲಾಗುತ್ತದೆ ಜನರು ಸಹಕಾರ ಕೊಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ಬಾಬಾಸಾಹೇಬ್ ಪಾಟೀಲ್, ವಿಶ್ವಾಸ ವೈದ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!