ಹೊಸದಿಗಂತ ವರದಿ, ಗದಗ:
ಮುಡಾ ಹಗರಣದಲ್ಲಿ ಐಎಎಸ್ ಅಧಿಕಾರಿಗಳ ಮೂಲಕ ವಿಚಾರಣೆ ಮಾಡುತ್ತಿದ್ದಾರೆ ತನಿಖೆಯಾದಾಗ ಮಾತ್ರ ಸತ್ಯ ಹೊರಬರುತ್ತೆ ಯಾರ್ಯಾರು ಯಾವ್ಯಾವ ಕಾಲದಲ್ಲಿ ಏನೋನು ಲಾಭ ಮಾಡಿಕೊಂಡಿದ್ದಾರೆ ಎಂಬ ಸತ್ಯ ಹೊರಬರಲಿದೆ ಎಂದು ಮಾಜಿ ಮುಖ್ಯ ಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮರ್ಥನೆಯ ಹೇಳಿಕೆಯನ್ನು ಖಂಡಿಸಿ ಮಾತನಾಡಿದರು.
ಯಡಿಯೂರಪ್ಪ ಕೇಸ್ ಮುಚ್ಚಿಹಾಕಲು ಮುಡಾ ಹಗರಣ ಪ್ರಸ್ತಾಪ ಮಾಡುತ್ತಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ಸಿದ ಅವರು ಯಡಿಯೂರಪ್ಪ ಕೇಸ್ ಈಗಾಗಲೇ ಕೋರ್ಟ್ ನಲ್ಲಿದೆ . ಯಡಿಯೂರಪ್ಪ ಅವರ ಮೇಲೆ 21 ಕೇಸ್ ಇವೆ ಅವುಗಳಿಂದ ನಿರ್ದೋಷಿಯಾದರೂ ಅವರನ್ನು ವಿನಾಕಾರಣ ಜೈಲಿಗೆ ಹಾಕಿದ್ದರು ನ್ಯಾಯಾಲಯ ಇತಿಹಾಸದಲ್ಲೇ ಪ್ರೈವೈಟ್ ಕಂಪ್ಲೇಂಟ್ ಮೇಲೆ ಏನೂ ವಿಚಾರಣೆಯಾಗದೇ ಜೈಲಿಗೆ ಹೋಗಿರುವ ಉದಾಹರಣೆ ಇಲ್ಲ ಯಡಿಯೂರಪ್ಪನವರು 23 ದಿನ ಜೈಲಿನಲ್ಲಿದ್ದು ಬಂದರು ಎಂದು ಹೇಳಿದರು.
ಹಿಂದುಳಿದ ವರ್ಗದಿಂದ ಎರಡನೇ ಬಾರಿಗೆ ನಾನು ಸಿಎಂ ಆಗಿದ್ದಕ್ಕೆ ವಿರೋಧ ಪಕ್ಷದವರಿಗೆ ಸಹಿಸೋದಕ್ಕೆ ಆಗುತ್ತಿಲ್ಲ ಎಂಬ ಸಿದ್ಧರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆಸಿದೆ ಅವರು ಸಿದ್ಧರಾಮಯ್ಯ ಹಿರಿಯ ರಾಜಕಾರಣಿ, ಅವರು ಎಲ್ಲರ ಮುಖ್ಯಮಂತ್ರಿ ಎಂದು ತಿಳಿದುಕೊಂಡಿದ್ದೇವೆ . ಆದರೆ ಅವರು ತಮ್ಮಷ್ಟಕ್ಕೆ ತಾವೇ ಒಂದು ವರ್ಗದ ನಾಯಕ ಅಂದುಕೊಳ್ಳೋದು ಅವರ ಮೇಲೆ ಚಾರ್ಜ್ ಬಂದಾಗ ಅದನ್ನ ಶೀಲ್ಡ್ ಆಗಿ ಉಪಯೋಗ ಮಾಡಿಕೊಳ್ಳೋದು ಎಷ್ಟರಮಟ್ಟಿಗೆ ಸರಿ ವಾಲ್ಮೀಕಿ ನಿಗಮದ ಹಗರಣದ ಹಣ ಎಸ್ಟಿ ಜನಕ್ಕೆ ಸೇರಿದ್ದು, ಎಸ್ಟಿ ಜನಾಂಗಕ್ಕೆ ಸರಕಾರದಿಂದ ಅನ್ಯಾಯ ಆಗಿದೆ. ಎಸ್ಟಿ ಜನಾಂಗದ ಕಾರ್ಯಕ್ರಮದ ಹಣ ದೋಚಿದ್ದಾರೆ. ಇಷ್ಟೆಲ್ಲ ಮಾಡಿದ್ದರೂ ಅಹಿಂದ ಅಂತ ಅದೇಗೆ ಹೇಳ್ತಿರಿ, ಎಸ್ಟಿ ಅಹಿಂದಕ್ಕೆ ಸೇರುವದಿಲ್ವಾ ಆ ಜನಾಂಗಕ್ಕೆ ಅನ್ಯಾಯ ಆಗಿದ್ದನ್ನು ಪ್ರಶ್ನೆ ಮಾಡಬಾರದಾ? ಪ್ರವಾಸೋದ್ಯಮ ಇಲಾಖೆಯಲ್ಲಿಯೂ ಭ್ರಷ್ಟಾಚಾರ ಆರೋಪ . ಈ ಬಗ್ಗೆ ನನಗೆ ಮಾಹಿತಿ ಇಲ್ಲ ಇಳಿದು ಪ್ರತಿಕ್ರಿಯೆ ಕೊಡುತ್ತೆನೆ. ಅದರ ಬಗ್ಗೆ ಪ್ರಾಮಾಣಿಕವಾಗಿ ತನಿಖೆಯಾಗಲಿ ಎಂದು ಬೊಮ್ಮಾಯಿ ಅವರು ಹೇಳಿದರು.
ಮೋದಿ ಮುಕ್ತಿದಿನ ಎಂಬ ಕಾಂಗ್ರೆಸ್ ನಿಂದ ಆಚರಣೆ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು ಇದು ಮೂರ್ಖತನದ ನಿರ್ದಾರ, ಮೂರನೇ ಬಾರಿ ಮೋದಿಯವರು ಪ್ರಮಾಣವಚನ ಸ್ವೀಕಾರ ಮಾಡಿ ಆಡಳಿತ ಮಾಡುತಿದ್ದಾರೆ. ಅತೀ ಹೆಚ್ಚು ಮತಗಳ ಸಂಖ್ಯೆ ಪಡೆದು ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ ಕಾಂಗ್ರೆಸ್ ನಲ್ಲಿ ಈ ಸಾಧನೆ ಮಾಡಲು ಯಾರಿಗೂ ಆಗಿಲ್ಲ ಅದೇಗೆ ಮುಕ್ತಿಯಾಗುತ್ತದೆ. ಉಪ ಚುನಾವಣೆಯಲ್ಲಿ ಕೆಲವು ಸೀಟ್ ಹೆಚ್ಚು ಬಂದಿವೆ ಎಂದು ಜೈ ರಾಮ್ ರಮೇಶ್ ಬಾಯಿಗೆ ಬಂದಂಗೆ ಮಾತನಾಡುತ್ತಾರೆ ಕಾಂಗ್ರೆಸ್ ನಲ್ಲಿ ಜೈರಾಮ್ ರಮೇಶ್ ಸ್ಥಾನವೇ ಭದ್ರವಾಗಿಲ್ಲ ಕಾಂಗ್ರೆಸ್ ಮುಕ್ತ ಪ್ರಧಾನಿ ಸಂಕಲ್ಪವಿದೆ ಅದು ಹೇಗೆ ಆಗುತ್ತದೆ ಎಂದು ಹೇಳಿದರು.