ಹೊಸದಿಗಂತ ವರದಿ, ಬಾಗಲಕೋಟೆ
ಜಿಲ್ಲೆಯ ಮುಧೋಳ ತಹಶೀಲ್ದಾರ ಸಂಗಮೇಶ ಬಾಡಗಿ (38)ರವರು ಹೃದಯಾಘಾತದಿಂದ ಗುರುವಾರ ರಾತ್ರಿ ನಿಧನರಾದರು.
ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ತಹಸೀಲ್ದಾರ ಸಂಗಮೇಶ ಅವರಿಗೆ ಹೃದಯಾಘಾತವಾಗಿದೆ. ಕಳೆದ ಮೂರು ವರ್ಷಗಳಿಂದ ಉತ್ತಮವಾಗಿ ಆಡಳಿತ ನಿರ್ವಹಿಸಿದ್ದ ಅವರು ಜನ ಮೆಚ್ಚುಗೆ ಗಳಿಸಿದ್ದರು. ಸಂಗಮೇಶ್ ಅವರು ಅವರು ಮೂಲತ: ಅಥಣಿ ತಾಲ್ಲೂಕಿನ ಜನವಾಡ ಮೂಲದವರು. ಓರ್ವ ಪುತ್ರಿ, ಪತ್ನಿಯನ್ನು ಅಗಲಿದ್ದಾರೆ. ತಹಶೀಲ್ದಾರವರು ಹೃದಯಾಘಾತದಿಂದ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಅವರ ನಿವಾಸಕ್ಕೆ ಜಮಖಂಡಿ ಎಸಿ ಸಿದ್ದು ಹುಲ್ಲಳ್ಳಿ ಹಾಗೂ ಅಧಿಕಾರಿಗಳು , ಸಾರ್ವಜನಿಕರು ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ