ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನ ಮಂತ್ರಿ ಮುದ್ರಾ ಯೋಜನೆಯ (ಪಿಎಂಎಂವೈ) ತರುಣ್ ಪ್ಲಸ್ ವಿಭಾಗದ ಅಡಿಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 25 ಸಾವಿರ ಜನರು ನೋಂದಾಯಿಸಿಕೊಂಡಿದ್ದಾರೆ ಎಂದು ಕೇಂದ್ರ ಹಣಕಾಸು ಸೇವೆಗಳ ಕಾರ್ಯದರ್ಶಿ ಎಂ.ನಾಗರಾಜು ಮಾಹಿತಿ ನೀಡಿದ್ದಾರೆ.
ನಾಲ್ಕು ತಿಂಗಳಲ್ಲಿ 24,557 ಹೊಸ ಸಾಲಗಾರರು ತರುಣ್ ಪ್ಲಸ್ ವರ್ಗದ ಅಡಿಯಲ್ಲಿ ಸಾಲವನ್ನು ಪಡೆದಿದ್ದು, ಇದರ ಮೊತ್ತ ₹3,790 ಕೋಟಿಗಳಷ್ಟಾಗಿದೆ.
2015ರ ಏಪ್ರಿಲ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಗೆ ಚಾಲನೆ ನೀಡಿದ್ದರು. ಇಲ್ಲಿಯವರೆಗೆ ₹33.65 ಲಕ್ಷ ಕೋಟಿ ಮೊತ್ತದ ಸಾಲ ಮಂಜೂರು ಮಾಡಲಾಗಿದೆ.
ಕಳೆದ ವರ್ಷ ಜುಲೈನಲ್ಲಿ ಮಂಡಿಸಿದ್ದ 2024–25ನೇ ಸಾಲಿನ ಬಜೆಟ್‌ನಲ್ಲಿ ತರುಣ್ ಪ್ಲಸ್ ಅಡಿಯಲ್ಲಿನ ಸಾಲದ ಮಿತಿಯನ್ನು ₹10 ಲಕ್ಷದಿಂದ ₹20 ಲಕ್ಷಕ್ಕೆ ಹೆಚ್ಚಿಸುವ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ , ಪ್ರಸ್ತಾಪಿಸಿದ್ದು, ಅಕ್ಟೋಬರ್ 25ರಂದು ಇದು ಜಾರಿಗೆ ಬಂದಿತ್ತು.