ಸಾಮಾಗ್ರಿಗಳು
ಮೂರು ಮಫಿನ್‌ಗೆ
ಬಾಳೆಹಣ್ಣು ಒಂದು
ಕೋಕೋ ಪೌಡರ್ ಒಂದು ಸ್ಪೂನ್
ಅಡುಗೆ ಸೋಡಾ ಚಿಟಿಕೆ
ಬೇಕಿಂಗ್ ಪೌಡರ್ ಕಾಲು ಸ್ಪೂನ್
ಕೋಕೋನಟ್ ಶುಗರ್ ಒಂದು ಸ್ಪೂನ್
ಎಣ್ಣೆ/ಬೆಣ್ಣೆ/ತುಪ್ಪ ಒಂದು ಸ್ಪೂನ್
ಹಾಲು ನಾಲ್ಕು ಸ್ಪೂನ್
ರಾಗಿ ಹಿಟ್ಟು ಎರಡು ಸ್ಪೂನ್
ಮಾಡುವ ವಿಧಾನ
ಮೊದಲು ಬೌಲ್‌ಗೆ ಬಾಳೆಹಣ್ಣನ್ನು ಹಾಕಿ ಸ್ಮ್ಯಾಶ್ ಮಾಡಿ
ಇದಕ್ಕೆ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಹಾಕಿ ಮಿಕ್ಸ್ ಮಾಡಿ
ಚೆನ್ನಾಗಿ ಮಿಕ್ಸ್ ಮಾಡಿದ ನಂತರ ಮಫಿನ್ ಪೇಪರ್‌ಗೆ ಹಾಕಿ
ಇದನ್ನು ಏರ್ ಫ್ರೈಯರ್ ಅಥವಾ ಅವನ್‌ನಲ್ಲಿ ಬೇಕ್ ಮಾಡಿ