ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಮುಖ್ಯಸ್ಥ ಮುಕೇಶ್ ಅಂಬಾನಿ ಈಗಾಲೇ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಖರೀದಿಸಿದ್ದು, ಇದೀಗ ಈಗ ಫುಟ್‌ಬಾಲ್ ತಂಡದ ಮೇಲೆ ಕಣ್ಣಿಟ್ಟಿದ್ದಾರೆ.
ಲಿವರ್‌ಪೂಲ್ ಮಾಲೀಕತ್ವ ಹೊಂದಿರುವ ಫೆನ್‌ವೇ ಸ್ಫೋರ್ಟ್ಸ್ ಗ್ರೂಪ್ ತಂಡವನ್ನು 4 ಶತಕೋಟಿ ಪೌಂಡ್ ಮಾರಾಟ ಮಾಡಲು ಮುಂದಾಗಿದೆ.
ಮುಖೇಶ್ ಅಂಬಾನಿ ಲಿವರ್‌ಪೂಲ್ ಖರೀದಿಸಲು ಆಸಕ್ತಿ ತೋರಿಸಿದ್ದು ಇದೇ ಮೊದಲಲ್ಲ. 2010 ರಲ್ಲಿ ಸಹಾರಾ ಗ್ರೂಪ್‌ನ ಅಧ್ಯಕ್ಷ ಸುಬ್ರೊಟೊ ರಾಯ್ ಜೊತೆಗೆ ರಿಲಯನ್ಸ್ ಇಂಡಸ್ಟ್ರೀಸ್ ಲಿವರ್‌ಪೂಲ್‌ನಲ್ಲಿ 51 ಪ್ರತಿಶತ ಪಾಲನ್ನು ಬಿಡ್ ಮಾಡಲು ಬಯಸಿತ್ತು. ಆದರೆ ಈ ವದಂತಿಯನ್ನು ಲಿವರ್‌ಪೂಲ್ ನಿರಾಕರಿಸಿತ್ತು.