ಬಹುಭಾಷಾ ನಟಿ ಸುಮನ್​ ರಂಗನಾಥ್​ ತಾಯಿ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುಭಾಷಾ ನಟಿ ಸುಮನ್​ ರಂಗನಾಥ್​ (Suman Ranganathan) ಅವರ ತಾಯಿ ಜ್ಯೋತಿ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಇಂದು (ಫೆಬ್ರವರಿ 9) ಬೆಳಗ್ಗೆ 7.50ರ ಸುಮಾರಿಗೆ ಕೊನೆಯುಸಿರು ಎಳೆದಿದ್ದಾರೆ ಎಂಬುದು ತಿಳಿದುಬಂದಿದೆ. ಜ್ಯೋತಿ ಅವರಿಗೆ 81 ವರ್ಷ ವಯಸ್ಸಾಗಿದೆ.
ರಕ್ತದೊತ್ತಡ (Blood Pressure) ಮತ್ತು ಉಸಿರಾಟದ ಸಮಸ್ಯೆಯಿಂದಾಗಿ ಅವರು ನಿಧನರಾಗಿದ್ದಾರೆ.
ನಟಿ ಸುಮನ್​ ಅವರ ಕುಟುಂಬದ () ಸದಸ್ಯರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಅಭಿಮಾನಿಗಳು ಮತ್ತು ಆಪ್ತರು ಪ್ರಾರ್ಥಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!