ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ದಾಳಿಯ ಮಾಸ್ಟರ್ ಮೈಂಡ್ ತಹವ್ವೂರ್ ರಾಣಾ ತನ್ನ ಪ್ರಜೆಯಲ್ಲ ಎಂದು ಪಾಕಿಸ್ತಾನ ಹೇಳಿಕೊಂಡಿದೆ.
ಅಮೆರಿಕದಿಂದ ರಾಣಾನನ್ನು ಭಾರತ ಕರೆ ತರುತ್ತಿದ್ದಂತೆ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದು, ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡದ ಪಾಕ್ ಈಗ ದಿಢೀರ್ ಸ್ಪಷ್ಟೀಕರಣ ನೀಡಿದ್ದು, ಆತ ತನ್ನ ಪ್ರಜೆಯಲ್ಲ , ಕೆನಡಾ ಪ್ರಜೆ ಎಂದು ಹೇಳಿದೆ.
ಕಳೆದ ಎರಡು ದಶಕಗಳಿಂದ ತಹವ್ವೂರ್ ರಾಣಾ ತನ್ನ ಪಾಕಿಸ್ತಾನಿ ದಾಖಲೆಗಳನ್ನು ನವೀಕರಿಸಿಲ್ಲ. ಇದರಿಂದ ಆತ ಕೆನಡಾ ಪ್ರಜೆ ಎನ್ನುವುದು ಸ್ಪಷ್ಟವಾಗಿದೆ ಎಂದು ತಿಳಿಸಿದೆ.
ಗುಪ್ತಚರ ವರದಿಗಳ ಪ್ರಕಾರ, ರಾಣಾ ಪಾಕಿಸ್ತಾನದ ಐಎಸ್‌ಐ ಜೊತೆ ಆಳವಾದ ಸಂಪರ್ಕ ಹೊಂದಿದ್ದ ಮತ್ತು ಪಾಕ್ ಸೇನೆಗೆ ಬೆಂಬಲ ನೀಡಿದ್ದ. ಮುಂಬೈ ದಾಳಿಯ ಸಂಚು ರೂಪಿಸುವಲ್ಲಿ ಪಾಕಿಸ್ತಾನದ ನೇರ ಪಾತ್ರದ ಬಗ್ಗೆ ರಾಣಾ ಬಹಿರಂಗ ಪಡಿಸುವ ಸಾಧ್ಯತೆಯಿದೆ.