ಮುಂಬೈ ಇಂಡಿಯನ್ಸ್ ನಿಂದ ಮತ್ತೆ ನಾಯಕರ ಬದಲಾವಣೆ: ಇಲ್ಲಿದೆ ಡೀಟೇಲ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈ ಇಂಡಿಯನ್ಸ್ ತನ್ನ ತಂಡದ ನಾಯಕನನ್ನು ಬದಲಿಸಿ ಸಾಕಷ್ಟು ಸುದ್ದಿಯಾಗಿತ್ತು. ಗುಜರಾತ್ ತಂಡದ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯರನ್ನು ಟ್ರೇಡಿಂಗ್ ಮೂಲಕ ಖರೀದಿ ಅವರಿಗೆ ನಾಯಕತ್ವ ನೀಡಿತ್ತು.ದೀಗ ತನ್ನ ಮಾಲೀಕತ್ವದ ಇನ್ನೊಂದು ತಂಡದ ನಾಯಕನನ್ನು ಇದಕ್ಕಿದ್ದಂತೆ ಬದಲಿಸಿದೆ.

ವಾಸ್ತವವಾಗಿ ವಿಶ್ವದ ವಿವಿದ ಲೀಗ್​ಗಳಲ್ಲಿ ತಂಡಗಳನ್ನು ಖರೀದಿಸಿರುವ ಮುಂಬೈ ಇಂಡಿಯನ್ಸ್, ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಆಡುವ ತನ್ನ ಒಡೆತನದ MI ಕೇಪ್ ಟೌನ್ ತಂಡದ ನಾಯಕತ್ವದಲ್ಲಿ ಬದಲಾವಣೆ ತಂದಿದೆ.
ಈ ಮೊದಲು MI ಕೇಪ್ ಟೌನ್ ತಂಡದ ನಾಯಕನಾಗಿದ್ದ ಅಫ್ಘಾನಿಸ್ತಾನ ತಂಡದ ಸ್ಪಿನ್ ಆಲ್​ರೌಂಡರ್ ರಶೀದ್ ಖಾನ್​ರನ್ನು ಕೆಳಗಿಳಿಸಿರುವ ಫ್ರಾಂಚೈಸ್, ವೆಸ್ಟ್ ಇಂಡೀಸ್ ತಂಡದ ದಿಗ್ಗಜ ಆಲ್​ರೌಂಡರ್ ಕೀರಾನ್ ಪೊಲಾರ್ಡ್ ಅವರನ್ನು ನೂತನ ನಾಯಕನಾಗಿ ಆಯ್ಕೆ ಮಾಡಿದೆ.

ಗಾಯದಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಶೀದ್ ಖಾನ್, ದಕ್ಷಿಣ ಆಫ್ರಿಕಾದ ನಡೆಯಲ್ಲಿರುವ ಟಿ20 ಲೀಗ್‌ನ ಹೊಸ ಆವೃತ್ತಿಗೆ ಲಭ್ಯವಿರುವುದಿಲ್ಲ. ಅಲ್ಲದೆ ಇದರಿಂದಾಗಿ ರಶೀದ್ ಬಿಗ್ ಬ್ಯಾಷ್ ಲೀಗ್ ಕೂಡ ಆಡಲು ಸಾಧ್ಯವಾಗಿಲ್ಲ. ಆದರೆ ಭಾರತ ವಿರುದ್ಧದ ಟಿ20 ಸರಣಿಗೆ ಅಫ್ಘಾನಿಸ್ತಾನ ತಂಡದಲ್ಲಿ ಆಯ್ಕೆಯಾಗಿರುವ ರಶೀದ್, ಈ ಸರಣಿಯಲ್ಲಿ ಆಡುವ ಬಗ್ಗೆ ಸಸ್ಪೆನ್ಸ್ ಇದೆ.

ಹೀಗಾಗಿ ಫ್ರಾಂಚೈಸಿಯು ದಕ್ಷಿಣ ಆಫ್ರಿಕಾ ಟಿ20 ಲೀಗ್‌ನ ಹೊಸ ಸೀಸನ್​ಗಾಗಿ ವೆಸ್ಟ್ ಇಂಡೀಸ್‌ನ ಮಾಜಿ ಆಲ್‌ರೌಂಡರ್ ಕೀರಾನ್ ಪೊಲಾರ್ಡ್ ಅವರನ್ನು ಮುಂಬೈ ಇಂಡಿಯನ್ಸ್ ಕೇಪ್ ಟೌನ್‌ ತಂಡದ ಹೊಸ ನಾಯಕನಾಗಿ ನೇಮಿಸಿದೆ .

ಮುಂಬೈ ಫ್ರಾಂಚೈಸಿಯು ILT20 ಲೀಗ್​ನಲ್ಲಿ ತನ್ನ MI ಎಮಿರೇಟ್ಸ್‌ ತಂಡದ ನಾಯಕನಾಗಿ ಕೀರಾನ್ ಪೊಲಾರ್ಡ್ ಅವರನ್ನು ಮಾಡಿತ್ತು. ಆದರೆ SA20 ಮತ್ತು ILT20 ಬಹುತೇಕ ಏಕಕಾಲಿದಲ್ಲಿ ನಡೆಯುವ ಕಾರಣ, ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಅವರನ್ನು ಪೊಲಾರ್ಡ್ ಬದಲಿಗೆ ನಾಯಕನನ್ನಾಗಿ ಆಯ್ಕೆ ಮಾಡಿದೆ.

ಇದರೊಂದಿಗೆ ಮುಂಬೈ ಇಂಡಿಯನ್ಸ್ ಮೂರು ವಿಭಿನ್ನ ಲೀಗ್‌ಗಳಲ್ಲಿ ತಮ್ಮ ತಂಡದ ನಾಯಕರನ್ನು ಬದಲಾಯಿಸಿದೆ. ಐಪಿಎಲ್​ನಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ನೂತನ ನಾಯಕರನ್ನಾಗಿ ನೇಮಕ ಮಾಡಿರುವ ಫ್ರಾಂಚೈಸ್, ಇದೀಗ ದಕ್ಷಿಣ ಆಫ್ರಿಕಾ T20 ಲೀಗ್‌ನಲ್ಲಿ ಕೀರಾನ್ ಪೊಲಾರ್ಡ್ ಅವರನ್ನು ನಾಯಕನಾಗಿ ನೇಮಿಸಿದೆ. ಹಾಗೆಯೇ ನಿಕೋಲಸ್ ಪೂರನ್ ಅವರನ್ನು ILT20 ಗೆ MI ಎಮಿರೇಟ್ಸ್‌ನ ನಾಯಕನನ್ನಾಗಿ ಆಯ್ಕೆಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!