ಧಿಡೀರ್ ರಾಜೀನಾಮೆ ಕೊಟ್ಟ ಮುಂಬೈ ಇಂಡಿಯನ್ಸ್ ಹೆಡ್​ ಕೋಚ್: ಕಾರಣ ಏನ್ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ಮುಖ್ಯ ಕೋಚ್ ಹುದ್ದೆಗೆ ಚಾರ್ಲೋಟ್​ ಎಡ್ವರ್ಡ್ಸ್ ರಾಜೀನಾಮೆ ನೀಡಿದ್ದಾರೆ. ಮುಂಬೈ ಫ್ರಾಂಚೈಸಿಯು ಈ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದೆ.

ಎಡ್ವರ್ಡ್​ ಅವರ ತರಬೇತಿಯಲ್ಲಿ ಮುಂಬೈ ಇಂಡಿಯನ್ಸ್ ಹಲವು ಯಶಸ್ಸುಗಳನ್ನು ಸಾಧಿಸಿದೆ. ಕೇವಲ ಮೂರು ಋತುಗಳಲ್ಲಿ ಎರಡು ವುಮೆನ್ಸ್ ಪ್ರೀಮಿಯರ್ ಲೀಗ್ (WPL) ಪ್ರಶಸ್ತಿಗಳನ್ನು ಗೆದ್ದ ಗೌರವ ಅವರಿಗೆ ಸಲ್ಲುತ್ತದೆ. ಯುವ ಕ್ರಿಕೆಟಿಗರಿಗೆ ಅವರು ಸ್ಫೂರ್ತಿ. ಇಂಗ್ಲೆಂಡ್ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ನಿಮ್ಮ ಹೊಸ ಪ್ರಯಾಣಕ್ಕೆ ಶುಭಾಶಯಗಳು ಎಂದು ಮುಂಬೈ ಇಂಡಿಯನ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ಚಾರ್ಲೋಟ್ ಎಡ್ವರ್ಡ್ಸ್ ತರಬೇತುದಾರಿಕೆಯಲ್ಲಿ ಅಪಾರ ಅನುಭವ ಹೊಂದಿದ್ದು,ಇಂಗ್ಲೆಂಡ್‌ನ ಮಹಿಳಾ ಕ್ರಿಕೆಟ್ ಸೂಪರ್ ಲೀಗ್‌ನಲ್ಲಿ ಸದರ್ನ್ ವೈಪರ್ಸ್ ತಂಡವನ್ನು ಐದು ಬಾರಿ ಚಾಂಪಿಯನ್ ಆಗಿ ಮಾಡಿದ್ದಾರೆ. ಚಾರ್ಲೋಟ್ ಎಡ್ವರ್ಡ್ಸ್ ಇಂಗ್ಲೆಂಡ್ ಮಹಿಳಾ ತಂಡದಲ್ಲಿ ಜಾನ್ ಲೆವಿಸ್ ಅವರ ಸ್ಥಾನವನ್ನು ತುಂಬಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!