ತವರಿಗೆ ಸ್ವಾಗತ ಎಂದ ಮುಂಬೈ ಇಂಡಿಯನ್ಸ್: ಮರಳಿ ತಂದಿದೆ ಅದ್ಭುತ ನೆನಪುಗಳು ಎಂದ ​​​ಹಾರ್ದಿಕ್​ ಪಾಂಡ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಐಪಿಎಲ್​ ೨೦೨೪ ಟೂರ್ನಿಗಾಗಿ ಭರದ ಸಿದ್ಧತೆ ನಡೆಯುತ್ತಿದ್ದು, ಗುಜರಾತ್​ ಟೈಟನ್ಸ್ ನಾಯಕನಾಗಿದ್ದ ​ ಆಲ್​​ರೌಂಡರ್​​​ ಹಾರ್ದಿಕ್​ ಪಾಂಡ್ಯ ಮುಂಬೈ ಇಂಡಿಯನ್ಸ್​ ತಂಡಕ್ಕೆ ವಾಪಸ್ಸಾಗಿದ್ದಾರೆ .

ತವರಿಗೆ ಹಾರ್ದಿಕ್​ ಎಂದು ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡುವ ಮೂಲಕ ಮುಂಬೈ ಇಂಡಿಯನ್ಸ್​ ತಂಡ ಖಚಿತಪಡಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹಾರ್ದಿಕ್​, ಅನೇಕ ಅದ್ಭುತ ನೆನಪುಗಳನ್ನು ಮರಳಿ ತಂದಿದೆ.

ಮುಂಬೈ, ವಾಂಖೆಡೆ, ಪಲ್ಟನ್​ಗೆ ಮರಳಿ ಬಂದಿರುವುದು ನನಗೆ ಒಳ್ಳೆಯದೆನಿಸುತ್ತಿದೆ ಎಂದು ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಮುಂಬೈ ಇಂಡಿಯನ್ಸ್​ ತಂಡಕ್ಕೆ ಐಪಿಎಲ್​ ಹರಾಜಿನಲ್ಲಿ 10 ಲಕ್ಷ ರೂಪಾಯಿಗೆ ಬಿಕರಿಯಾದ ಹಳೆಯ ವಿಡಿಯೋವನ್ನು ಹಾರ್ದಿಕ್​ ಹಂಚಿಕೊಂಡಿದ್ದಾರೆ.

ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ ತಮ್ಮ ಅದ್ಭುತ ಪ್ರದರ್ಶನದೊಂದಿಗೆ ಹಾರ್ದಿಕ್​, ವೈಟ್​ ಬಾಲ್​ ಕ್ರಿಕೆಟ್​ನಲ್ಲೇ ಉತ್ತಮ ಆಲ್​ರೌಂಡರ್​ ಎನಿಸಿಕೊಂಡಿದ್ದಾರೆ. ಇದರ ನಡುವೆ 15 ಕೋಟಿ ರೂ. ದೊಡ್ಡ ಮೊತ್ತಕ್ಕೆ ಮುಂಬೈ ತಂಡದಿಂದ ಹಾರ್ದಿಕ್​ ಗುಜರಾತ್​ ತಂಡವನ್ನು ಸೇರಿಕೊಂಡಿದ್ದರು.

ಹಾರ್ದಿಕ್​ ಪಾಂಡ್ಯರನ್ನು ತಮ್ಮ ತಂಡಕ್ಕೆ ಮರಳಿ ಪಡೆಯಲು ಸಾಕಾಗುವಷ್ಟು ಹಣವಿಲ್ಲದಿದ್ದರಿಂದ ಮುಂಬೈ ಇಂಡಿಯನ್ಸ್​ ತಂಡ ಆಲ್​ರೌಂಡರ್​ ಕ್ಯಾಮರೋನ್ ಗ್ರೀನ್​ರನ್ನು ರಾಯಲ್​ ಚಾಲೆಂಜರ್ಸ್​ ತಂಡಕ್ಕೆ ವರ್ಗಾವಣೆ ಮಾಡಿ, ಹಾರ್ದಿಕ್​ ಪಾಂಡ್ಯರನ್ನು ತಮ್ಮ ತಂಡಕ್ಕೆ ಮರಳಿ ಪಡೆದಿದೆ.

ಹಾರ್ದಿಕ್​ ಮರಳಿ ತಂಡ ಸೇರಿದ್ದಕ್ಕೆ ಖುಷಿ ವ್ಯಕ್ತಪಡಿಸಿರುವ ನೀತಾ ಅಂಬಾನಿ, ಇದು ಹೃದಯಸ್ಪರ್ಶಿ ಪುನರ್ಮಿಲನ ಎಂದು ವರ್ಣಿಸಿದ್ದಾರೆ. ಮನೆಗೆ ಮರಳಿದ ಹಾರ್ದಿಕ್​ರನ್ನು ಸ್ವಾಗತಿಸಲು ನಾವು ರೋಮಾಂಚನಗೊಂಡಿದ್ದೇವೆ! ಇದು ನಮ್ಮ ಮುಂಬೈ ಇಂಡಿಯನ್ಸ್ ಕುಟುಂಬದೊಂದಿಗೆ ಹೃದಯಸ್ಪರ್ಶಿ ಪುನರ್ಮಿಲನವಾಗಿದೆ! ಮುಂಬೈ ಇಂಡಿಯನ್ಸ್‌ನ ಯುವ ಪ್ರತಿಭೆಯಿಂದ ಈಗ ಟೀಮ್ ಇಂಡಿಯಾ ಸ್ಟಾರ್ ಆಗಿರುವ ಹಾರ್ದಿಕ್ ಬಹಳ ದೂರ ಸಾಗಿದ್ದಾರೆ ಮತ್ತು ಮುಂಬೈ ಇಂಡಿಯನ್ಸ್​ ಜತೆಗಿನ ಭವಿಷ್ಯದ ಒಡೆನಾಟದ ಮೇಲೆ ತುಂಬಾ ಉತ್ಸುಕರಾಗಿದ್ದೇವೆ ಎಂದು ಹೇಳಿದ್ದಾರೆ.

ಆಕಾಶ್​ ಅಂಬಾನಿ ಮಾತನಾಡಿ ಹಾರ್ದಿಕ್ ಅವರನ್ನು ಮುಂಬೈ ಇಂಡಿಯನ್ಸ್‌ಗೆ ಹಿಂತಿರುಗಿ ನೋಡುವುದು ತುಂಬಾ ಸಂತೋಷವಾಗಿದೆ. ತವರಿಗೆ ಮರಳಿರುವುದು ಸಂತೋಷವಾಗಿದೆ. ಅವರು ಆಡುವ ಯಾವುದೇ ತಂಡಕ್ಕೆ ಅವರು ಉತ್ತಮ ಸಮತೋಲನವನ್ನು ಒದಗಿಸುತ್ತಾರೆ. ಮುಂಬೈ ಇಂಡಿಯನ್ಸ್​ ಕುಟುಂಬದೊಂದಿಗೆ ಹಾರ್ದಿಕ್ ಅವರ ಮೊದಲ ಕ್ರಿಕೆಟ್​ ಹಾದಿ ಭಾರೀ ಯಶಸ್ವಿಯಾಗಿದೆ ಮತ್ತು ಅವರು ತಮ್ಮ ಎರಡನೇ ಇನಿಂಗ್ಸ್​ನಲ್ಲಿ ಇನ್ನೂ ಹೆಚ್ಚಿನ ಯಶಸ್ಸನ್ನು ಸಾಧಿಸುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!