ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನ ಕಲ್ಯಾಣ್ ರೈಲು ನಿಲ್ದಾಣದ ಹೊರಭಾಗದಲ್ಲಿ ಬರೋಬ್ಬರಿ 54 ಸ್ಫೋಟಕಗಳು ಪತ್ತೆಯಾಗಿದೆ. ಇತ್ತ ರೈಲ್ವೇ ಪೊಲೀಸರು ಸಂಪೂರ್ಣ ಪ್ರದೇಶ ಸುತ್ತುವರಿದಿದ್ದರೆ, ಮುಂಬೈ ಪೊಲೀಸರು ಮುಂಬೈನಲ್ಲಿ ಹೈ ಅಲರ್ಟ್ ಘೋಷಿಸಿದ್ದಾರೆ.
ರೈಲು ನಿಲ್ದಾಣದ ಹೊರಭಾಗದಲ್ಲಿ ಈ ಸ್ಫೋಟಕ ಪತ್ತೆಯಾಗಿದೆ. ಇದು ಎಲೆಕ್ಟ್ರಾನಿಕ್ ಸ್ಪೋಟಕಗಳಾಗಿದ್ದು, ಪರ್ವತ, ಬಂಡೆಗಳನ್ನು ಒಡೆಯಲು ಬಳಸಲಾಗುತ್ತದೆ. ಈ ಸ್ಫೋಟಕ ರೈಲು ನಿಲ್ದಾಣದ ಹೊರಭಾಗಕ್ಕೆ ಹೇಗೆ ತಲುಪಿತು? ಇದನ್ನು ಉದ್ದೇಶಪೂರ್ಕವಾಗಿ ಇಲ್ಲಿ ಇಡಲಾಗಿದೆಯೋ ಅಥವಾ ಇಲ್ಲಿ ಮರೆತಿದ್ದಾರೋ ಅನ್ನೋ ಕುರಿತು ತನಿಖೆ ನಡೆಯುತ್ತಿದೆ.
ಸುಮಾರು 50 ಸ್ಫೋಟಗಳಿದ್ದ ಬಾಕ್ಸ್ ಒಂದು ಕಲ್ಯಾಣ ರೈಲು ನಿಲ್ದಾಣದಿಂದ ಕೆಲ ದೂರದಲ್ಲಿನ ಪ್ಲಾಟ್‌ಫಾರ್ಮ್‌ನಲ್ಲಿ ಪತ್ತೆಯಾಗಿದೆ. ಪ್ಲಾಟ್‌ಫಾರ್ಮ್‌ನಲ್ಲಿ ಬಾಕ್ಸ್ ಗಮನಿಸಿದ ರೈಲ್ವೇ ಪೊಲೀಸರು ತಕ್ಷಣವೆ ಸ್ಥಳಕ್ಕೆ ಧಾವಿಸಿ ಪರಿಶೀಲಿಸನೆ ನಡೆಸಿದ್ದಾರೆ. ಸ್ಫೋಟಕಗಳು ಪತ್ತೆಯಾಗುತ್ತಿದ್ದಂತೆ ರೈಲು ನಿಲ್ದಾಣದಲ್ಲಿ ಅಲರ್ಟ್ ಘೋಷಿಸಲಾಯಿತು. ನಿಲ್ದಾಣದಲ್ಲಿದ್ದ ಪ್ರಯಾಣಿಕರನ್ನು ಹೊರಕ್ಕೆ ಕಳುಹಿಸಲಾಗಿತ್ತು. ಇದೇ ವೇಳೆ ಬಾಂಬ್ ನಿಷ್ಕ್ರೀಯ ದಳ ಸ್ಥಳಕ್ಕೆ ಧಾವಿಸಿ ಸ್ಫೋಟಕಗಳ ಪರಿಶೀಲನೆ ನಡೆಸಿತು.