ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ಪೊಲೀಸರು ನೀಲಿ ಚಿತ್ರಗಳ ನಿರ್ಮಾಣದಲ್ಲಿ ತೊಡಗಿದ್ದ ಗುಂಪೊಂದನ್ನು ಬಂಧಿಸಿದ್ದಾರೆ. ಮುಂಬೈ ಸಮೀಪದ ಲೊನಾವ್ಲಾನಲ್ಲಿ ಐಶಾರಾಮಿ ವಿಲ್ಲಾ ಬಾಡಿಗೆಗೆ ಪಡೆದಿದ್ದ 15 ಸದಸ್ಯರ ತಂಡ ಅಲ್ಲಿ ನೀಲಿ ಚಿತ್ರದ ಚಿತ್ರೀಕರಣ ನಡೆಸುತ್ತಿದ್ದರು ಎನ್ನಲಾಗಿದೆ.
ಚಿತ್ರೀಕರಣದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಗುಂಪನ್ನು ಹಿಂಬಾಲಿಸಿದ ಪೊಲೀಸರು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಲೊನಾವ್ಲಾ ಗ್ರಾಮಾಂತರ ಪೊಲೀಸರು ಐವರು ಯುವತಿಯರು ಸೇರಿದಂತೆ ನೀಲಿ ಚಿತ್ರ ತಯಾರಿಕೆಯಲ್ಲಿ ತೊಡಗಿದ್ದ 13 ಜನರನ್ನು ಬಂಧಿಸಿದ್ದಾರೆ.
ವಿವಿಧ ದೇಶಗಳಿಂದ ಬಂದಿದ್ದ ಯುವಕರು ನೀಲಿ ಚಿತ್ರಕ್ಕಾಗಿ ಒಟ್ಟಾಗಿ ಚಿತ್ರೀಕರಣ ಮಾಡಿದ್ದಾರೆ. ಇದೇ ಕಾರಣಕ್ಕೆ ಐವರು ಯುವತಿಯರನ್ನು ಬಳಸಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಈ ಯುವಕರು OTT ಡಿಜಿಟಲ್ ಪ್ಲಾಟ್‌ಫಾರ್ಮ್‌ಗಾಗಿ ನೀಲಿ ಚಲನಚಿತ್ರವನ್ನು ಮಾಡುತ್ತಿದ್ದರು ಎಂದು ತನಿಖೆಯಲ್ಲಿ ವರದಿಯಾಗಿದೆ. ಪೊಲೀಸರು ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದು. ಚಿತ್ರೀಕರಣಕ್ಕೆ ಬಳಸಿದ್ದ ಡಿಜಿಟಲ್ ಕ್ಯಾಮೆರಾ ಹಾಗೂ ಇತರ ಕೆಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಇದು ಇತ್ತೀಚಿಗೆ ವಿಪರೀತವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು.