ಮುಂಬೈ ಉಗ್ರ ದಾಳಿಯ ಮಾಸ್ಟರ್​ ಮೈಂಡ್ ತಹವ್ವೂರ್ ರಾಣಾ ಅಮೆರಿಕದಿಂದ ಗಡಿಪಾರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈನ್ ತಾಜ್​ ಹೋಟೆಲ್​ ಮೇಲಿನ ಉಗ್ರ ದಾಳಿಯ ಮಾಸ್ಟರ್​ ಮೈಂಡ್ ತಹವ್ವೂರ್ ರಾಣಾನನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಾಳೆ ಬೆಳಗಿನ ಜಾವ ಭಾರತಕ್ಕೆ ಕರೆತರುವ ನಿರೀಕ್ಷೆ ಇದೆ.

ದೆಹಲಿಗೆ ಕರೆತರಲಾಗುತ್ತದೆಯೇ ಅಥವಾ ಮುಂಬೈಗೆ ಕರೆತರಲಾಗುತ್ತದೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಆರಂಭಿಕ ಕೆಲವು ವಾರಗಳನ್ನು ಎನ್​ಐಎ ಕಸ್ಟಡಿಯಲ್ಲಿ ಕಳೆಯುತ್ತಾರೆ ಎಂದು ಹೇಳಲಾಗಿದೆ.

ಭಾರತಕ್ಕೆ ರಾಣಾ ಹಸ್ತಾಂತರಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಸಲ್ಲಿಸಲಾದ ಅರ್ಜಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಮುಂದೆ ಮಂಡಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!