ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೂನ್ 21 ಅಂತರಾಷ್ಟ್ರೀಯ ಯೋಗ ದಿನ. ದೇಶದೆಲ್ಲೆಡೆ ಯೋಗ ದಿನಾಚರಣೆ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಮುಂಬೈನ ಗೇಟ್‌ವೇ ಆಫ್ ಇಂಡಿಯಾದಲ್ಲಿ ನೌವಾರಿ ಸೀರೆ ಧರಿಸಿದ ಮಹಿಳೆಯರು ಯೋಗ ಪ್ರದರ್ಶಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ಮಹಿಳೆಯರು ಯೋಗ ಮಾಡುತ್ತಾ ‘ಓಂ’ ಪಠಣ ಮಾಡುತ್ತಿದ್ದಾರೆ. ಸುಖಾಸನದಲ್ಲಿ ಕಣ್ಣು ಮುಚ್ಚಿ ಕುಳಿತು ಯೋಗ ಮಾಡಿದರು. ನೊವಾರಿ (ಕಚ್ಚ, ಸಕಚ್ಚ, ಲುಗಾಡೆ ಎಂದೂ ಕರೆಯುತ್ತಾರೆ) ಮಹಾರಾಷ್ಟ್ರದ ಮಹಿಳೆಯರು ಧರಿಸುವ ಒಂಬತ್ತು ಗಜ ಉದ್ದದ ಸೀರೆಯಾಗಿದ್ದು ಇದನ್ನು ಅವರ ಸಾಂಪ್ರದಾಯಿಕ ರೀತಿಯಲ್ಲಿ ನೇಯ್ದು ಕಟ್ಟಲಾಗುತ್ತದೆ.
ಒಂಬತ್ತು ಗಜಗಳಷ್ಟು ಉದ್ದವಿರುವ ಸೀರೆಯಿಂದ ‘ನೌವರಿ’ ಎಂಬ ಹೆಸರು ಬಂದಿದೆ. ಇದು ಮಹಾರಾಷ್ಟ್ರದ ಮಹಿಳೆಯರ ಸಾಂಪ್ರದಾಯಿಕ ಸೀರೆ. ಈ ವಿಶೇಷ ಸೀರೆಯೊಂದಿಗೆ ಮಹಿಳೆಯರು ಮೂಗುತಿ ಧರಿಸುವುದು ಮಹಾರಾಷ್ಟ್ರದ ಸಂಪ್ರದಾಯವಾಗಿದೆ. ಮಹಿಳೆಯರು ಈ ಸೀರೆಯೊಂದಿಗೆ ಯೋಗ ಮಾಡುತ್ತಿರುವುದು ವಿಶೇಷವಾಯಿತು.