ಮುಂಬೈನ ಎನ್‌ಕೌಂಟರ್ ಸ್ಪೆಶಲಿಸ್ಟ್ ದಯಾ ನಾಯಕ್ ಕರ್ತವ್ಯದಿಂದ ನಿವೃತ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈನ ಎನ್‌ಕೌಂಟರ್ ಸ್ಪೆಶಲಿಸ್ಟ್ ದಯಾ ನಾಯಕ್ ತಮ್ಮ ದೀರ್ಘ ಸೇವೆಯನ್ನು ಮುಗಿಸಿ ನಿವೃತ್ತಿಯಾಗಿದ್ದಾರೆ.

ಕ್ರೈಂ ಬ್ರಾಂಚ್ ಯೂನಿಟ್ 9ರಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ದಯಾ ನಾಯಕ್, ತಮ್ಮ ಎಸಿಪಿ ಯೂನಿಫಾರ್ಮ್‌ನ್ನು ಮೊದಲ ಬಾರಿಗೆ ಧರಿಸಿದ ಕ್ಷಣವನ್ನು ಎಕ್ಸ್‌ನಲ್ಲಿ ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ. “ಎಸಿಪಿ ಯೂನಿಫಾರ್ಮ್‌ ಅನ್ನು ಮೊದಲ ಬಾರಿಗೆ ಧರಿಸಿದ್ದೇನೆ, ಆದರೆ ನಾಳೆ ಅದನ್ನು ಶಾಶ್ವತವಾಗಿ ತೊರೆಯಬೇಕಿದೆ. ಸೇವೆಯ ನಂತರ, ಈ ಕ್ಷಣವು ಆಳವಾದ, ಶಾಂತ ಗೌರವವನ್ನು ತಂದಿದೆ. ಇದು ಕೇವಲ ಬಡ್ತಿಯಲ್ಲ, ಕರ್ತವ್ಯ, ಶಿಸ್ತು ಮತ್ತು ಸಮರ್ಪಣೆಯ ಜೀವನದ ಸಂಕೇತವಾಗಿದೆ” ಎಂದು ಅವರು ಬರೆದಿದ್ದಾರೆ. ನಿವೃತ್ತಿಗೆ ಕೇವಲ ಎರಡು ದಿನಗಳ ಮೊದಲು ಈ ಗೌರವವನ್ನು ನೀಡಲಾಗಿದೆ.

ತಿ ಹೆಜ್ಜೆಗೂ ಕೃತಜ್ಞನಾಗಿದ್ದೇನೆ, ರಾಜ್ಯ ಮತ್ತು ದೇಶಕ್ಕೆ ಸೇವೆ ಸಲ್ಲಿಸಿದ ಗೌರವಕ್ಕೆ ಧನ್ಯವಾದ. ಜೈ ಹಿಂದ್, ಜೈ ಮಹಾರಾಷ್ಟ್ರ ಎಂದು ದಯಾ ನಾಯಕ್ ತಿಳಿಸಿದ್ದಾರೆ.

ಭಯವಿಲ್ಲದ ಕ್ರಿಮಿನಲ್‌ ವಿರುದ್ಧದ ಹೋರಾಟ ಮತ್ತು ಹಲವು ಹೈ-ಸ್ಟೇಕ್ ಕಾರ್ಯಾಚರಣೆಗಳಿಂದ ಖ್ಯಾತರಾದ ದಯಾ ನಾಯಕ್‌ ಅವರ ಈ ಕೊನೆಯ ಕ್ಷಣದ ಬಡ್ತಿಯನ್ನು ಸಾರ್ವಜನಿಕ ಸೇವೆಗೆ ಅವರ ಸಮರ್ಪಣೆ, ಧೈರ್ಯ, ಮತ್ತು ಬದ್ಧತೆಗೆ ಸೂಕ್ತ ಗೌರವವೆಂದು ಪರಿಗಣಿಸಲಾಗಿದೆ.

ದಯಾ ನಾಯಕ್‌ ಅವರರ ದಶಕಗಳ ಸೇವೆಯು ಮುಂಬೈ ಪೊಲೀಸ್ ಇತಿಹಾಸದಲ್ಲಿ ಒಂದು ದಂತಕಥೆಯಾಗಿದೆ.

ದಯಾ ನಾಯಕ್ 1995ರಲ್ಲಿ ಮುಂಬೈ ಪೊಲೀಸ್ ಇಲಾಖೆಗೆ ಸೇರಿದ್ದು, ಪ್ರಸ್ತುತ ಬಾಂದ್ರಾ ಘಟಕದ ಅಪರಾಧ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ದಯಾ ನಾಯಕ್ ಅವರ ಬಗ್ಗೆ ಚಲನಚಿತ್ರವನ್ನು ಕೂಡ ನಿರ್ಮಿಸಲಾಗಿದೆ. 2006ರಲ್ಲಿ ಭ್ರಷ್ಟಾಚಾರ ನಿಗ್ರಹ ದಳವು ಅವರ ವಿರುದ್ಧ ಅಕ್ರಮ ಆಸ್ತಿ ಪ್ರಕರಣವನ್ನು ದಾಖಲಿಸಿದ್ದು, ಬಳಿಕ ಅವರಿಗೆ ಕ್ಲೀನ್ ಚಿಟ್ ದೊರೆತಿತ್ತು. ದಯಾ ನಾಯಕ್ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದಲ್ಲಿ (ATS) ಕೂಡ ಕಾರ್ಯ ನಿರ್ವಹಿಸಿದ್ದಾರೆ. 2021ರಲ್ಲಿ ಅಂಬಾನಿ ನಿವಾಸಕ್ಕೆ ಬಂದಿರುವ ಭದ್ರತಾ ಬೆದರಿಕೆ ಮತ್ತು ಥಾಣೆ ಉದ್ಯಮಿ ಮನ್ಸುಖ್ ಹಿರೇನ್ ಅವರ ಕೊಲೆ ಪ್ರಕರಣವನ್ನು ಕೂಡ ಭೇದಿಸಿದ್ದ ತಂಡದಲ್ಲಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!