Tuesday, October 28, 2025

ಕಸದಂತೆ ದೀಪಗಳನ್ನು ಗುಡಿಸಿದ ಪೌರ ಕಾರ್ಮಿಕರು: ಎಸ್‌ಪಿ ನಾಯಕರು ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಯೋಧ್ಯೆಯಲ್ಲಿ ದೀಪಾವಳಿ ಹಿನ್ನೆಲೆ ದೀಪೋತ್ಸವ ಆಚರಣೆಯ ಬಳಿಕ ಪುರಸಭೆಯ ಪೌರ ಕಾರ್ಮಿಕರು ದೀಪಗಳನ್ನು ಗುಡಿಸಿ ನಂದಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ರೀತಿ ದೀಪಗಳನ್ನು ಕಸದಂತೆ ಗುಡಿಸಿ ನಂದಿಸಿದಿರುವುದನ್ನು ಸಮಾಜವಾದಿ ಪಕ್ಷ(ಎಸ್‌ಪಿ) ನಾಯಕರು ಖಂಡಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಯೋಧ್ಯೆ ಪುರಸಭೆಯ ಪೌರ ಕಾರ್ಮಿಕರು ದೀಪೋತ್ಸವ ಆಚರಣೆಯ ನಂತರ ಪೊರಕೆಗಳಿಂದ ಉರಿಯುತ್ತಿರುವ ದೀಪಗಳನ್ನು ತಳ್ಳಿ ನಂದಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.

ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಎಸ್‌ಪಿ ನಾಯಕ, ಉತ್ತರ ಪ್ರದೇಶದ ಮಾಜಿ ಸಚಿವ ಜೈ ಶಂಕರ್ ಪಾಂಡೆ, ಪುರಸಭೆಯ ನೈರ್ಮಲ್ಯ ಕಾರ್ಮಿಕರ ಕ್ರಮವು ಜನರ ಧಾರ್ಮಿಕ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.

error: Content is protected !!