Friday, December 26, 2025

ಹಾರುವ ಹಕ್ಕಿಗಳ ಮೇಲೆ ಪಾಲಿಕೆ ಕಣ್ಣು: ಪಾರಿವಾಳ ಪ್ರಿಯರಿಗೆ ಶಾಕ್ ನೀಡಿದ ಹೊಸ ನಿಯಮ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿಷೇಧಿಸಿ ಗ್ರೇಟರ್ ಬೆಂಗಳೂರು ಅಥಾರಿಟಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಈ ನಿಯಮವನ್ನು ಉಲ್ಲಂಘಿಸುವವರಿಗೆ ಕೇವಲ ದಂಡ ಮಾತ್ರವಲ್ಲದೆ, ಗಂಭೀರ ಪ್ರಕರಣಗಳಲ್ಲಿ ಜೈಲು ಶಿಕ್ಷೆ ವಿಧಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.

ಪಾರಿವಾಳಗಳ ರೆಕ್ಕೆಗಳು, ಮಲ ಮತ್ತು ಅವುಗಳ ವಾಸಸ್ಥಳದಿಂದ ಹರಡುವ ಬ್ಯಾಕ್ಟೀರಿಯಾ ಹಾಗೂ ಫಂಗಸ್‌ಗಳಿಂದ ಮನುಷ್ಯರಲ್ಲಿ ಉಸಿರಾಟದ ತೊಂದರೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ಕ್ರಮ ಅನಿವಾರ್ಯ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲೆಲ್ಲಿ ನಿಷೇಧ ಅನ್ವಯಿಸುತ್ತದೆ?

ರಸ್ತೆ ಮತ್ತು ಪಾದಚಾರಿ ಮಾರ್ಗಗಳು.

ಉದ್ಯಾನವನಗಳು ಮತ್ತು ಬಸ್ ನಿಲ್ದಾಣಗಳು.

ಮೆಟ್ರೋ ನಿಲ್ದಾಣಗಳು ಹಾಗೂ ಸರ್ಕಾರಿ ಕಟ್ಟಡಗಳು.

ಅಪಾರ್ಟ್‌ಮೆಂಟ್‌ಗಳ ಕಾಮನ್ ಏರಿಯಾಗಳು.

ಪಾರಿವಾಳಗಳ ಮೇಲೆ ಪ್ರೀತಿ ಇರುವವರ ಭಾವನೆಗಳನ್ನು ಗೌರವಿಸಿರುವ ಪಾಲಿಕೆ, ಆಹಾರ ನೀಡಲು ಪ್ರತ್ಯೇಕ ಹಾಗೂ ನಿಯಂತ್ರಿತ ಸ್ಥಳಗಳನ್ನು ಗುರುತಿಸುವ ಪ್ರಕ್ರಿಯೆ ಆರಂಭಿಸಿದೆ. ಅಧಿಕಾರಿಗಳು ಸೂಚಿಸುವ ಈ ನಿಗಧಿತ ಸ್ಥಳಗಳಲ್ಲಿ ಮಾತ್ರ ಇನ್ನು ಮುಂದೆ ಆಹಾರ ನೀಡಲು ಅವಕಾಶವಿರುತ್ತದೆ.

ನಗರದ ಸ್ವಚ್ಛತೆ ಮತ್ತು ಜನರ ಆರೋಗ್ಯ ಕಾಪಾಡುವ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ.

error: Content is protected !!