October 8, 2026
Thursday, October 8, 2026
spot_img

ಹುಬ್ಬಳ್ಳಿಯಲ್ಲಿ ಹಾಡಹಗಲೇ ಮರ್ಡ*ರ್‌: ತಲವಾರದಿಂದ ಹೊಡೆದು ಕೊ*ಲೆ

ಹೊಸದಿಗಂತ ವರದಿ ಹುಬ್ಬಳ್ಳಿ:

ವಿದ್ಯಾನಗರ ಸಿದ್ದೇಶ್ವರ ಪಾಕ್೯ ಬನಶಂಕರಿ ಬಡವಾಣೆ ಹತ್ತಿರ ವ್ಯಕ್ತಿಯೋರ್ವನನ್ನು ಇಬ್ಬರು ತಲಾವಾರ ನಿಂದ ಹೊಡೆ ಭೀಕರವಾಗಿ ಹತ್ಯೆ ಮಾಡಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಮೃತ ವ್ಯಕ್ತಿಯು ದ್ವಿಚಕ್ರ ವಾಹನ ಮೇಲೆ ಬರುವಾಗ ಎದುರಿಗೆ ಬಂದ ಇಬ್ಬರು ಅಡ್ಡಗಟ್ಟಿ ಕೆಳಗೆ ಬೀಳಿಸಿ ತಲವಾರನಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಇದರಿಂದ ಮೃತನ ಮುಖ ಗುರುತು ಪತ್ತೆ ಯಾಗುತ್ತಿಲ್ಲ.

ಸ್ಥಳಕ್ಕೆ ವಿದ್ಯಾನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಮಾಡಿದ ಆರೋಪಿಗಳಿಗೆ ಬಲೆ ಬಿಸಿದ್ದಾರೆ.

Must Read