ಹೊಸದಿಗಂತ ಡಿಜಿಟಲ್ ಡೆಸ್ಕ್:
ರಂಗಾಯಣ ರಘು, ಪಾವನಾ ಗೌಡ ನಟಿಸಿರುವ, ಜನಾರ್ಧನ್ ಚಿಕ್ಕಣ್ಣ ಡೈರೆಕ್ಷನ್ ಮಾಡಿರುವ ಮರ್ಡರ್ ಮಿಸ್ಟರಿ ಕಥಾಹಂದರದ ‘ಅಜ್ಞಾತವಾಸಿ’ ಸಿನಿಮಾ ಕಳೆದ ತಿಂಗಳು ತೆರೆಗೆ ಬಂದಿತ್ತು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು.ಈಗ ಸಿನಿಮಾ ಒಟಿಟಿಗೆ ಬರಲು ತಯಾರಾಗಿದೆ.
ಈ ಕುರಿತು ZEE5 ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದೂ, ‘ಆ ಎರಡು ಸತ್ಯಗಳ ರೋಚಕ ಕಥೆ ಏನು ಅಂತ ಗೊತ್ತಾಗೋಕೆ ಇನ್ನು ಕೆಲವೇ ದಿನ ಬಾಕಿ. ಇದೇ ಮೇ 28ಕ್ಕೆ ಬರ್ತಾ ಇದೆ ಸೂಪರ್ ಹಿಟ್ ಸಿನಿಮಾ ಅಜ್ಞಾತವಾಸಿ. ಮೇ 28ರಿಂದ ನಿಮ್ಮ ZEE5 ನಲ್ಲಿ ಮಿಸ್ ಮಾಡದೇ ನೋಡಿ’ ಎಂದು ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ.
ಅಜ್ಞಾತವಾಸಿ ಸಿನಿಮಾ ಮಲೆನಾಡಿನ ಹಳ್ಳಿಯಲ್ಲಿ ಒಂದೇ ಒಂದು ಪೊಲೀಸ್ ಸ್ಟೇಷನ್ ಇರೋ ಊರಿದಾಗಿದೆ. ಆದರೆ, 1997 ರ ಹೊತ್ತಿಗೆ ಇಲ್ಲೊಂದು ಕೊಲೆ ಆಗುತ್ತದೆ. ಆದರೆ, ಕೇಸೇ ಇರದ ಪೊಲೀಸ್ ಸ್ಟೇಷನ್‌ನಲ್ಲಿರೋ ಪೊಲೀಸರು ಈ ಕೇಸ್ ಅನ್ನ ಹೇಗೆ ಕಂಡು ಹಿಡೀತಾರೆ ಅನ್ನೋದೇ ಈ ಚಿತ್ರದ ಕಥೆ.