ಹೊಸದಿಗಂತ ವರದಿ ಹಾಸನ :
ಕೌಟುಂಬಿಕ ಕಲಹ ಹಿನ್ನಲೆ ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲೆ ಪತ್ನಿಗೆ ಪತಿರಾಯ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ.
ಹಾಸನ ನಗರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಲೋಕನಾಥ್ ಪತ್ನಿಗೆ ಚಾಕುವಿನಿಂದ ಇರಿದ ಆರೋಪಿ. ಮಮತಾ ಚಾಕು ಇರಿತಕ್ಕೆ ಒಳಗಾದ ಮಹಿಳೆ ಕಳೆದ ನಾಲ್ಕೈದು ದಿನಗಳಿಂದ ಗಂಡ-ಹೆಂಡತಿ ನಡುವೆ ನಡೆದಿದ್ದ ಜಗಳ ಇಂದು ಪತ್ನಿ ಪತಿ ವಿರುದ್ಧ ದೂರು ನೀಡಲು ಎಸ್ಪಿ ಕಚೇರಿಗೆ ಬಂದಿದ್ದರು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲೆ ಪತ್ನಿಗೆ ಪತಿರಾಯ ಚಾಕುವಿನಿಂದ ಇರಿದಿದ್ದಾನೆ.
ಚಾಕುವಿನಿಂದ ಇರಿದು ಕಾನ್ಸ್‌ಟೇಬಲ್ ಲೋಕನಾಥ್ ಎಸ್ಕೇಪ್ ಆಗಲು ಯತ್ನಿಸಿದ್ದ ಪೋಲಿಸರು ತಕ್ಷಣವೇ ವಶಕ್ಕೆ ಪಡಿದಿದ್ದಾರೆ. ಕೂಡಲೇ ಪೋಲಿಸರು ಚಿಕಿತ್ಸೆಗಾಗಿ ಮಮತಾಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಮತಾ ಸಾವನ್ನಪ್ಪಿದ್ದಾರೆ.