ಹೊಸದಿಗಂತ ವರದಿ ಹಾವೇರಿ :
ಜಿಲ್ಲೆಯಾದ್ಯಂತ ಶನಿವಾರ ಬೆಳಗಿನಿಂದಲೇ ಧಾರಾಕಾರ ಮಳೆ ಸುರಿದು ವರುಣದೇವ ತಂಪೆರೆದಿದ್ದಾನೆ. ಸಾಧಾರಣ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಬೆಳಗಿನ ಜಾವದಿಂದಲೇ ಧಾರಾಕಾರ ಮಳೆ ಅರಂಭಗೊಂಡಿದ್ದು ಎಲ್ಲರಲ್ಲೂ ಸಂತಸ ಮೂಡಿಸಿದೆ.
ಶುಕ್ರವಾರ ಸಂಜೆ ಕೊಂಚ ಗಾಳಿ ಬೀಸಿ, ಜಿಲ್ಲೆಯ ಅಲ್ಲಲ್ಲಿ ಮಳೆ ಸುರಿದ ಪರಿಣಾಮ ಜಿಲ್ಲೆಯ ಹಲವೆಡೆ ವಿದ್ಯುತ್ ವ್ಯವಸ್ಥೆ ಕೈಕೊಟ್ಟಿದೆ. ಇದರಿಂದಾಗಿ ಇಡೀರಾತ್ರಿ ಶಿಗ್ಗಾಂವಿ, ರಾಣೆಬೆನ್ನೂರ, ರಟ್ಟೀಹಳ್ಳಿ, ಹಿರೇಕೆರೂರ, ಹಾವೇರಿ ಸೇರಿದಂತೆ ಜಿಲ್ಲೆಯ ಹಲವೆಡೆ ವಿದ್ಯುತ್ ಇಲ್ಲದೇ ಜನರು ಹೆಸ್ಕಾಂಗೆ ಹಿಡಿಶಾಪ ಹಾಕಿದರು.
ಶನಿವಾರ ಬೆಳಗಿನಿಂದಲೇ ಆಗಾಗ್ಗೆ ಧಾರಾಕಾರ ಮಳೆ ಸುರಿದು ನಿರಂತರವಾಗಿ ಮುಸಲಧಾರೆ ಮುಂದುವರೆದಿದೆ.